Select Your Language

Notifications

webdunia
webdunia
webdunia
Saturday, 12 April 2025
webdunia

ಅಪ್ರಾಪ್ತರ ಮೇಲೆ ನಡೆದ ದೌರ್ಜನ್ಯ ಅತ್ಯಾಚಾರವಷ್ಟೇ, ಮಹಿಳೆಯರ ಮೇಲಲ್ಲ-ಸಚಿವ ತಿವಾರಿಯಿಂದ ವಿವಾದಾತ್ಮಕ ಹೇಳಿಕೆ

ಉತ್ತರ ಪ್ರದೇಶ
ಉತ್ತರ ಪ್ರದೇಶ , ಸೋಮವಾರ, 10 ಜೂನ್ 2019 (10:17 IST)
ಉತ್ತರ ಪ್ರದೇಶ : ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ಉತ್ತರ ಪ್ರದೇಶದ ಜಲ ಸಂಪನ್ಮೂಲ ಸಚಿವ ಉಪೇಂದ್ರ ತಿವಾರಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.




ಸುದ್ದಿಗೋಷ್ಠಿಯ ವೇಳೆ  ಅತ್ಯಾಚಾರ ಪ್ರಕರಣಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ  ಸಚಿವ ಉಪೇಂದ್ರ ತಿವಾರಿ, ಅತ್ಯಾಚಾರಕ್ಕೆ ಅದರದ್ದೇ ಆದ ಸ್ವರೂಪವಿದೆ. ಅಪ್ರಾಪ್ತ ವಯಸ್ಸಿನವರ ಮೇಲೆ ನಡೆದರೆ ಅದು ಅತ್ಯಾಚಾರ. ಮಧ್ಯ ವಯಸ್ಸಿನ ಮಹಿಳೆಯರ ಮೇಲೆ ನಡೆದರೆ ಅದು ಭಿನ್ನ ಎಂದು ಹೇಳಿಕೆ ನೀಡಿದ್ದಾರೆ.

ಸಚಿವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಲವರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ರಾಷ್ಟ್ರೀಯ ಹೆದ್ದಾರಿ ಬಂದ್; ಎಲ್ಲೆಲ್ಲಿ ಬಂದ್ ಆಗಲಿದೆ ಗೊತ್ತಾ?