Publish Date: Wed, 05 Jun 2019 (09:14 IST)
Updated Date: Wed, 05 Jun 2019 (09:18 IST)
ಕೋಲ್ಕೊತ್ತಾ: ಇದು ಯಾವುದೇ ಸಿನಿಮಾ ಕತೆ ಅಲ್ಲ. ಬದಲಾಗಿ ಪಶ್ಚಿಮ ಬಂಗಾಲದಲ್ಲಿ ನಡೆದ ಭಯಾನಕ ಕೊಲೆಗಾರನ ಕತೆ.
ಕಮ್ರುಜಮಾನ್ ಸರ್ಕಾರ್ ಎಂಬ ಈ ದುಷ್ಟ ಕಾಮುಕ ಮಹಿಳೆಯರನ್ನು ಕಬ್ಬಿಣದ ರಾಡ್ ನಿಂದ ಕೊಲೆ ಮಾಡಿ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿರುವ ದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ!
ಈತನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದುವರೆಗೆ ಹೀಗೆ ಈತ ಐದು ಕೊಲೆಗಳನ್ನು ಮಾಡಿದ್ದಾನೆ ಎನ್ನಲಾಗಿದೆ. ಎಲ್ಲವೂ ಒಂದೇ ರೀತಿಯಲ್ಲಿ ಕೊಲೆ ನಡೆದಿದೆ.
ಸಂಜೆ ವೇಳೆ ಒಂಟಿ ಮಹಿಳೆಯರ ಮನೆಗೆ ನುಗ್ಗಿ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡುತ್ತಿದ್ದ ಈತ ಬಳಿಕ ಅವರ ಮೇಲೆ ಅತ್ಯಾಚಾರವೆಸಗುತ್ತಿದ್ದ. ಸದಾ ಕೆಂಪು ಮೋಟಾರ್ ಬೈಕ್ ಮತ್ತು ಹೆಲ್ಮೆಟ್ ಧರಿಸಿ ಓಡಾಡುತ್ತಿದ್ದ ಈತ ಪೊಲೀಸರಿಗೆ ತಲೆನೋವಾಗಿದ್ದ. 42 ವರ್ಷದ ಈ ವಿಚಿತ್ರ ಕಾಮುಕನನ್ನು ನ್ಯಾಯಾಂಗ ಬಂಧನದಲ್ಲಿದ್ದಾನೆ.