Select Your Language

Notifications

webdunia
webdunia
webdunia
webdunia

ಪಾಕಿಸ್ತಾನದಲ್ಲಿ ಹಿಂದೂ ಅಪ್ರಾಪ್ತ ಬಾಲಕಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು

ಪಾಕಿಸ್ತಾನದಲ್ಲಿ ಹಿಂದೂ ಅಪ್ರಾಪ್ತ ಬಾಲಕಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು
ಪಾಕಿಸ್ತಾನ , ಸೋಮವಾರ, 10 ಜೂನ್ 2019 (06:55 IST)
ಪಾಕಿಸ್ತಾನ : 13 ವರ್ಷ ವಯಸ್ಸಿನ ಹಿಂದೂ ಬಾಲಕಿಗೆ ಬಲವಂತವಾಗಿ ಮದ್ಯ ಕುಡಿಸಿ ಕಾಮುಕರು ಅತ್ಯಾಚಾರ ಎಸಗಿದ ಘಟನೆ ಪಾಕಿಸ್ತಾನದ ಸಿಂಧ್ ನ ತಾಂಡೋ ಮೊಹಮ್ಮದ್ ಖಾನ್'ನಲ್ಲಿ ಜೂನ್ 7 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.




ಬಾಲಕಿ ದಿನಸಿ ಸಾಮಾನು ತರಲು ಅಂಗಡಿಗೆ ತೆರಳಿದ ಸಮಯದಲ್ಲಿ ಕಾಮುಕರು ಆಕೆಯನ್ನು ಅಪಹರಿಸಿ ಬಲವಂತವಾಗಿ ಮದ್ಯಪಾನ ಮಾಡಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಮೈದಾನದಲ್ಲಿ ಎಸೆದು ಹೋಗಿದ್ದಾರೆ.


ಮಗಳು ಮನೆಗೆ ಇನ್ನು ಬಾರದಿರುವುದನ್ನು ಕಂಡು ಆಕೆಯ ಪೋಷಕರು ಆಕೆಯನ್ನು ಹುಡುಕಾಡಿದಾಗ ಮೈದಾನದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಮಗಳು ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ನಡೆದಿರುವುದು ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ಮಾರಾಮಾರಿ; ನಾಲ್ವರು ಬಿಜೆಪಿ ಕಾರ್ಯಕರ್ತರು ಬಲಿ