Select Your Language

Notifications

webdunia
webdunia
webdunia
webdunia

ಪೊನ್ನಿಯನ್ ಸೆಲ್ವನ್ ಒಟಿಟಿ ಹಕ್ಕಿನಿಂದಲೇ ನೂರು ಕೋಟಿ ಸಂಪಾದಿಸಿದ ನಿರ್ಮಾಪಕ

ಪೊನ್ನಿಯನ್ ಸೆಲ್ವನ್ ಒಟಿಟಿ ಹಕ್ಕಿನಿಂದಲೇ ನೂರು ಕೋಟಿ ಸಂಪಾದಿಸಿದ ನಿರ್ಮಾಪಕ
ಚೆನ್ನೈ , ಗುರುವಾರ, 15 ಸೆಪ್ಟಂಬರ್ 2022 (14:47 IST)
ಚೆನ್ನೈ: ನಿರ್ದೇಶಕ ಮಣಿರತ್ನಂ ಸಿನಿಮಾಗಳೆಂದರೆ ಅಭಿಮಾನಿಗಳಲ್ಲಿ ನಿರೀಕ್ಷೆ ಅಷ್ಟೇ ಹೆಚ್ಚಾಗಿರುತ್ತದೆ. ಇದೀಗ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಎಂಬ ಬಹುತಾರಾಗಣದ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಈ ಪ್ಯಾನ್ ಇಂಡಿಯಾ ಸಿನಿಮಾ ಸೆಪ್ಟೆಂಬರ್ 30 ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮೊದಲೇ ಚಿತ್ರದ ಬಗ್ಗೆ ಸಾಕಷ್ಟು ಹೈಪ್ ಕ್ರಿಯೇಟ್ ಆಗಿದ್ದು ಬಾಕ್ಸ್ ಆಫೀಸ್ ಧೂಳೀಪಟ ಮಾಡುವುದು ಖಚಿತ.

ಚಿಯಾನ್ ವಿಕ್ರಮ್, ಐಶ್ವರ್ಯಾ ರೈ ಸೇರಿದಂತೆ ಬಹುತಾರಾಗಣವಿರುವ ಈ ಐತಿಹಾಸಿಕ ಸಿನಿಮಾದ ಒಟಿಟಿ ಹಕ್ಕನ್ನು ಅಮೆಝೋನ್ ಪ್ರೈಮ್ ಬರೋಬ್ಬರಿ 125 ಕೋಟಿ ರೂ.ಗೆ ಖರೀದಿ ಮಾಡಿದೆ. ಆ ಮೂಲಕ ಬಿಡುಗಡೆಗೂ ಮೊದಲೇ ಚಿತ್ರ ನೂರು ಕೋಟಿ ಕ್ಲಬ್ ಸೇರಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಕಿರುತೆರೆ ನಟ ರವಿ ಪ್ರಸಾದ್ ನಿಧನ: ಕಿರುತೆರೆ ಲೋಕದ ಕಂಬನಿ