ಬೆಂಗಳೂರು: ನಟಿ ರಾಧಿಕಾ ಪಂಡಿತ್ ರಾಕಿಂಗ್ ಸ್ಟಾರ್ ಯಶ್ ಮಡದಿಯಾಗಿ ಇಬ್ಬರು ಮಕ್ಕಳ ತಾಯಿಯಾದ ಮೇಲೆ ಚಿತ್ರರಂಗದಿಂದ ದೂರವಿದ್ದಾರೆ. ಅವರು ಚಿತ್ರರಂಗಕ್ಕೆ ಮರಳಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಲೇ ಇರುತ್ತಾರೆ.
ಇತ್ತೀಚೆಗೆ ಸೈಮಾ ಸಮಾರಂಭಕ್ಕೆ ಬಂದಿದ್ದ ರಾಧಿಕಾಗೆ ಪತ್ರಕರ್ತರೊಬ್ಬರು ನೀವು ಯಾವಾಗ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಧಿಕಾ ಆದಷ್ಟು ಬೇಗ ಎಂದಿದ್ದಾರೆ.
ಹೀಗಾಗಿ ರಾಧಿಕಾ ಸಿನಿಮಾ ರಂಗವನ್ನು ಸಂಪೂರ್ಣವಾಗಿ ಮರೆತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಒಂದು ವೇಳೆ ಕಮ್ ಬ್ಯಾಕ್ ಮಾಡುವುದಿದ್ದರೆ ರಮ್ಯಾ ರೀತಿ ನಿರ್ಮಾಪಕಿಯಾಗಿ ಕಮ್ ಬ್ಯಾಕ್ ಮಾಡುತ್ತಾರಾ ಕಾದು ನೋಡಬೇಕಿದೆ.