Publish Date: Thu, 15 Sep 2022 (09:20 IST)
Updated Date: Thu, 15 Sep 2022 (09:33 IST)
ಬೆಂಗಳೂರು: ಕಿರುತೆರೆಯ ಖ್ಯಾತ ನಟ ರವಿ ಪ್ರಸಾದ್ ಅಲಿಯಾಸ್ ರವಿ ಮಂಡ್ಯ ಅನಾರೋಗ್ಯದಿಂದಾಗಿ ನಿನ್ನೆ ನಿಧನರಾಗಿದ್ದಾರೆ.
ಜಾಂಡೀಸ್ ಗೆ ತುತ್ತಾಗಿದ್ದ ರವಿ ಕಿಡ್ನಿ ಸಮಸ್ಯೆಯಿಂದಲೂ ಬಳಲುತ್ತಿದ್ದರು. ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಟಿ.ಎನ್. ಸೀತಾರಾಮ್ ನಿರ್ದೇಶನದ ಮಗಳು ಜಾನಕಿ, ಯಶೋಧೆ, ನಮ್ಮನೆ ಯುವರಾಣಿ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ನಟಿಸಿ ಖ್ಯಾತರಾಗಿದ್ದರು. ಅವರ ನಿಧನಕ್ಕೆ ವಿಕ್ರಾಂತ್ ರೋಣ ಖ್ಯಾತಿಯ ನಟಿ ನೀತಾ ಅಶೋಕ್, ಅಂಕಿತಾ ಅಮರ್, ನಟ ಜೆಕೆ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.