Publish Date: Wed, 07 Sep 2022 (16:01 IST)
Updated Date: Wed, 07 Sep 2022 (16:02 IST)
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ವಿವಾದದಿಂದಾಗಿ ಕಿರುತೆರೆಯಿಂದ ಬ್ಯಾನ್ ಆಗಿರುವ ನಟ ಅನಿರುದ್ಧ್ ಜತ್ಕಾರ್ ಈಗ ಹೊಸ ಅವತಾರದಲ್ಲಿ ಮತ್ತೆ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ನಟ ಅನಿರುದ್ಧ್ ಮೊದಲಿನಿಂದಲೂ ಸ್ವಚ್ಛತಾ ಅಭಿಯಾನದ ಮೂಲಕ ಸಾಮಾಜಿಕ ಕಳಕಳಿಯ ಸಂದೇಶಗಳು, ಪೋಸ್ಟ್ ಗಳನ್ನು ಮಾಡುತ್ತಿದ್ದರು.
ಇದೀಗ ಬೆಂಗಳೂರು ಮಳೆಗೆ ತತ್ತರಿಸಿದ್ದು, ಮಳೆಯ ಬಗ್ಗೆ ಪ್ರತ್ಯಕ್ಷ ವರದಿ ನೀಡುವ ವರದಿಗಾರನಾಗಿ ಖಾಸಗಿ ಸುದ್ದಿ ಮಾಧ್ಯಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ಈ ಮೂಲಕ ತಾವು ಈಗಾಗಲೇ ನಡೆದಿರುವ ಘಟನೆಯಿಂದ ಕುಗ್ಗಿ ಹೋಗಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.