Select Your Language

Notifications

webdunia
webdunia
webdunia
webdunia

ಜೊತೆ ಜೊತೆಯಲಿ ಧಾರವಾಹಿಗೆ ಎಂಟ್ರಿ ಕೊಟ್ಟ ಹರೀಶ್ ರಾಜ್

ಜೊತೆ ಜೊತೆಯಲಿ ಧಾರವಾಹಿಗೆ ಎಂಟ್ರಿ ಕೊಟ್ಟ ಹರೀಶ್ ರಾಜ್
ಬೆಂಗಳೂರು , ಮಂಗಳವಾರ, 30 ಆಗಸ್ಟ್ 2022 (09:50 IST)
ಬೆಂಗಳೂರು: ಧಾರವಾಹಿ ತಂಡದ ಜೊತೆಗಿನ ಮನಸ್ತಾಪದ ಬಳಿಕ ನಟ ಅನಿರುದ್ಧ್ ಜತ್ಕಾರ್ ಅವರನ್ನು ಜೊತೆ ಜೊತೆಯಲಿ ಧಾರವಾಹಿಯ ಆರ್ಯವರ್ಧನ್ ಪಾತ್ರದಿಂದ ಹೊರಹಾಕಲಾಗಿತ್ತು.

ಇದೀಗ ಹೊಸ ಆರ್ಯವರ್ಧನ್ ಯಾರಾಗುತ್ತಾರೆ ಎಂಬ ಬಗ್ಗೆ ಕುತೂಹಲವಿದೆ. ಈ ನಡುವೆ ಸ್ಯಾಂಡಲ್ ವುಡ್ ನಟ, ಬಿಗ್ ಬಾಸ್ ಖ‍್ಯಾತಿಯ ಹರೀಶ್ ರಾಜ್ ಜೊತೆ ಜೊತೆಯಲಿ ಧಾರವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಹರೀಶ್ ರಾಜ್ ಆರ್ಯವರ್ಧನ್ ಆಗಿ ಧಾರವಾಹಿಗೆ ಬರಲಿದ್ದಾರೆ ಎಂಬ ರೂಮರ್ ಗಳಿತ್ತು.

ಆದರೆ ತಾನು ಮಾಡುತ್ತಿರುವುದು ಆರ್ಯವರ್ಧನ್ ಪಾತ್ರವಲ್ಲ ಎಂದು ಹರೀಶ್ ರಾಜ್ ಈಗಾಗಲೇ ಅಭಿಮಾನಿಗಳಿಗೆ ಸುಳಿವು ನೀಡಿದ್ದಾರೆ. ಇಂದಿನ ಸಂಚಿಕೆಯಿಂದ ಹರೀಶ್ ರಾಜ್ ಧಾರವಾಹಿಗೆ ಎಂಟ್ರಿ ಕೊಟ್ಟಿದ್ದು ಅವರ ಪಾತ್ರವೇನು ಎಂಬುದು ಸಸ್ಪೆನ್ಸ್ ಆಗಿ ಉಳಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಕೆಂಡ್ ನಲ್ಲೂ ಎದ್ದೇಳದ ಲೈಗರ್ ಫ್ಲಾಪ್