Publish Date: Tue, 30 Aug 2022 (09:10 IST)
Updated Date: Tue, 30 Aug 2022 (09:19 IST)
ಹೈದರಾಬಾದ್: ವಿಜಯ್ ದೇವರಕೊಂಡ ನಾಯಕರಾಗಿರುವ ಲೈಗರ್ ಸಿನಿಮಾ ವೀಕೆಂಡ್ ನಲ್ಲಾದರೂ ಗಳಿಕೆ ಹೆಚ್ಚಿಸಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು.
ಆದರೆ ಅದು ಸುಳ್ಳಾಯಿತು. ವಿಜಯ್ ಸಿನಿಮಾ ಭಾನುವಾರ ಗಳಿಸಿದ್ದು ಕೇವಲ 5.50 ಕೋಟಿ. ಐದು ದಿನಗಳ ಬಳಿಕ ಸಿನಿಮಾ 50 ಕೋಟಿ ದಾಟಲು ಹರಸಾಹಸಪಡುತ್ತಿದೆ.
ಇತ್ತೀಚೆಗೆ ಬಂದ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಹೋಲಿಸಿದರೆ ಲೈಗರ್ ಗಳಿಕೆ ತೀರಾ ಕಳಪೆಯಾಗಿದೆ. ಹೀಗಾಗಿ ಈ ಸಿನಿಮಾ ಫ್ಲಾಪ್ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.