Publish Date: Tue, 30 Aug 2022 (08:40 IST)
Updated Date: Tue, 30 Aug 2022 (09:09 IST)
ಮುಂಬೈ: ನಟಿ ರಶ್ಮಿಕಾ ಮಂದಣ್ಣ ಎಷ್ಟೇ ದೊಡ್ಡ ಹೆಸರು ಮಾಡಿದ್ದರೂ ಅಭಿಮಾನಿಗಳಿಗೆ ಮಾತ್ರ ಯಾವತ್ತೂ ನಿರಾಸೆ ಮಾಡಿಲ್ಲ.
ರಶ್ಮಿಕಾ ಎಲ್ಲೇ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ತಮ್ಮನ್ನು ಇಷ್ಟಪಡುವವರ ಮುಂದೆ ರಶ್ಮಿಕಾ ಹಮ್ಮು ಬಿಮ್ಮು ತೋರದೇ ಖುಷಿಪಡಿಸಿದ್ದೇ ಹೆಚ್ಚು.
ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ತಮ್ಮನ್ನು ನೋಡಲು ಬಂದ ಎಲ್ಲಾ ಅಭಿಮಾನಿಗಳಿಗೆ ಸೆಲ್ಫೀಗೆ ಪೋಸ್ ನೀಡಿ ಖುಷಿಪಡಿಸಿದ್ದಾರೆ. ಇದಕ್ಕೂ ಮೊದಲೂ ಹಲವು ಬಾರಿ ಅವರು ಈ ರೀತಿ ಮಾಡಿದ್ದಾರೆ. ಅಲ್ಲದೆ, ಫೋಟೋಗ್ರಾಫರ್ ಗಳು ತಮಗಾಗಿ ತಂದ ಕೇಕ್ ಕತ್ತರಿಸಿ ಖುಷಿ ನೀಡಿದ್ದರು. ಹೀಗಾಗಿ ರಶ್ಮಿಕಾ ಅಭಿಮಾನಿಗಳನ್ನು ಯಾವತ್ತೂ ನಿರಾಸೆ ಮಾಡಲ್ಲ ಎಂಬುದು ಸ್ಪಷ್ಟ.