Publish Date: Mon, 29 Aug 2022 (08:10 IST)
Updated Date: Mon, 29 Aug 2022 (08:48 IST)
ಹೈದರಾಬಾದ್: ಲೈಗರ್ ಖ್ಯಾತಿಯ ನಟ ವಿಜಯ್ ದೇವರಕೊಂಡ ಮುಂದೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಇನ್ನಷ್ಟು ಬೆಳೆಯಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ.
ಆದರೆ ವಿಜಯ್ ಭವಿಷ್ಯದಲ್ಲಿ ದೊಡ್ಡ ಸ್ಟಾರ್ ಆಗಲ್ಲ. ಅವರು ಎಚ್ಚರಿಕೆಯಿಂದ ಸಿನಿಮಾ ಆಯ್ಕ ಮಾಡದೇ ಹೋದರೆ ಮುಂದೊಂದು ದಿನ ತೆರೆಮರೆಗೆ ಸರಿಯುತ್ತಾರೆ ಎಂದು ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದಾರೆ.
ಇದಕ್ಕೂ ಮೊದಲು ವೇಣು ಸ್ವಾಮಿ ಪ್ರಭಾಸ್ ಮದುವೆಯಾದರೆ ಅವರ ಜೀವನ ಚೆನ್ನಾಗಿರಲ್ಲ ಎಂದು ಶಾಕ್ ಕೊಟ್ಟಿದ್ದರು. ಈಗ ಮತ್ತೆ ಅಂತಹದ್ದೇ ಒಂದು ಖಡಕ್ ಭವಿಷ್ಯ ನುಡಿದಿದ್ದಾರೆ.