Publish Date: Mon, 29 Aug 2022 (09:30 IST)
Updated Date: Mon, 29 Aug 2022 (09:44 IST)
ಬೆಂಗಳೂರು: ನಿರ್ಮಾಪಕರ ಜೊತೆಗಿನ ಕಿತ್ತಾಟದಿಂದಾಗಿ ನಟ ಅನಿರುದ್ಧ್ ಜತ್ಕಾರ್ ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬಂದಿದ್ದಾರೆ. ಆದರೆ ಇದು ಅಭಿಮಾನಿಗಳಿಗೆ ತೀವ್ರ ಬೇಸರವುಂಟು ಮಾಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಮಗೆ ಆರ್ಯವರ್ಧನ್ ಆಗಿ ಅನಿರುದ್ಧ್ ಅವರೇ ಬೇಕು ಎಂದು ಟ್ರೆಂಡ್ ಮಾಡಿಕೊಂಡಿದ್ದಾರೆ. ಕೆಲವರು ದೇವರಿಗೆ ದೀಪ ಹಚ್ಚುವ ಮೂಲಕ ತಮ್ಮ ಕೋರಿಕೆ ಈಡೇರಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಆದರೆ ಅಭಿಮಾನಿಯೊಬ್ಬರಂತೂ ಅತಿರೇಕದ ಪ್ರಾರ್ಥನೆ ಮಾಡಿದ್ದು, ಮೈ ಮೇಲೆ ಬರೆ ಹಾಕಿಕೊಂಡು ಪ್ರಾರ್ಥನೆ ಮಾಡಿದ್ದಾರೆ.
ಇದು ಅನಿರುದ್ಧ್ ಅವರ ಗಮನಕ್ಕೆ ಬಂದಿದ್ದು, ಈ ರೀತಿ ದಯವಿಟ್ಟು ಯಾರೂ ಮಾಡಬೇಡಿ. ಇದು ನನಗೆ ತೀವ್ರ ಬೇಸರ ಉಂಟು ಮಾಡುತ್ತದೆ ಎಂದು ಮನವಿ ಮಾಡಿದ್ದಾರೆ.