ಬೆಂಗಳೂರು: ನವರಸನಾಯಕ ಜಗ್ಗೇಶ್ ಎಲ್ಲವನ್ನೂ ಓಪನ್ ಆಗಿಯೇ ಹೇಳುವ ವ್ಯಕ್ತಿ. ತೋತಾಪುರಿ ಸಿನಿಮಾ ಪ್ರೆಸ್ ಮೀಟ್ ನಲ್ಲಿ ಅವರು ತಮ್ಮ ಸಂಭಾವನೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಮತ್ತು ಕಿರುತೆರೆ ಶೋ ತೀರ್ಪುಗಾರರಾಗಿ ತಾವು ಪಡೆಯುವ ಸಂಭಾವನೆಯನ್ನು ಜಗ್ಗೇಶ್ ಓಪನ್ ಆಗಿ ಹೇಳಿದ್ದಾರೆ.
ಸಂಭಾವನೆ ವಿಚಾರದಲ್ಲಿ ನಾನು ಮುಚ್ಚಿಡಲ್ಲ. ಸಿನಿಮಾವಾದರೆ 2 ಕೋಟಿ ರೂ. ಸಂಭಾವನೆ ಪಡೆಯುತ್ತೇನೆ. ಕಿರುತೆರೆಯಾದರೆ 3 ಕೋಟಿವರೆಗೆ ಪಡೆಯುತ್ತೇನೆ. ನನ್ನ ಹೆಂಡತಿ-ಮಕ್ಕಳ ಜೊತೆಗೆ ನೆಮ್ಮದಿಯಾಗಿರಲು ಇಷ್ಟು ಸಾಕು ಎಂದು ಜಗ್ಗೇಶ್ ಓಪನ್ ಆಗಿ ಹೇಳಿಕೊಂಡಿದ್ದಾರೆ.