ಬೆಂಗಳೂರು: ತೋತಾಪುರಿ ಸಿನಿಮಾ ಪ್ರೆಸ್ ಮೀಟ್ ನಲ್ಲಿ ನವರಸನಾಯಕ ಜಗ್ಗೇಶ್ ನಾಯಕಿ ನಟಿ ಅದಿತಿ ಪ್ರಭುದೇವ ಕಾಲೆಳೆಯುವ ಕೆಲಸ ಮಾಡಿದ್ದಾರೆ.
ಅದಿತಿ ಬಗ್ಗೆ ಹೊಗಳಿ ಮಾತನಾಡಿದ ಜಗ್ಗೇಶ್ ಕೊನೆಗೆ ತಮ್ಮ ಎಂದಿನ ಹಾಸ್ಯ ಶೈಲಿಯಲ್ಲಿ ಅವರ ಮತ್ತು ಮತ್ತೊಬ್ಬ ಸಹ ನಟ ಡಾಲಿ ಧನಂಜಯ್ ಕಾಲೆಳೆಯುವ ಕೆಲಸ ಮಾಡಿದರು.
ಮಳ್ಳ ಡಾಲಿಗೂ, ಅದಿತಿಗೂ ಜಾಯಿಂಟ್ ಮಾಡೋಣ ಅಂತ ಟ್ರೈ ಮಾಡಿದ್ವಿ. ಆದರೆ ಆಗ್ಲೇ ಇಲ್ಲ ಎಂದು ಜಗ್ಗೇಶ್ ಹೇಳುತ್ತಿದ್ದಂತೇ ಅಲ್ಲೇ ಕೂತಿದ್ದ ಡಾಲಿ ಬಿಡಿ ಸಾರ್ ಅವರಿಗೆ ಮದುವೆ ಫಿಕ್ಸ್ ಆಗಿದೆ. ಪಾಪ ಬಿಡಿ ಎಂದರು. ಅತ್ತ ಅದಿತಿ ಕೂಡಾ ನಗುತ್ತಲೇ ಬಿಟ್ಬಿಡಿ ಸರ್ ಎಂದು ಕೈ ಮುಗಿದರು. ಇಡೀ ಸಭಾಂಗಣದಲ್ಲಿ ಜಗ್ಗೇಶ್ ಮಾತಿಗೆ ನಗುವೋ ನಗು.
ಇಷ್ಟಕ್ಕೇ ಮುಗಿದಿರಲಿಲ್ಲ. ವೇದಿಕೆ ಮೇಲೆ ಅದಿತಿಗೆ ಸ್ಮರಣಿಕೆ ಕೊಟ್ಟು ಸನ್ಮಾನಿಸುವ ವೇಳೆ ಅವರ ಭಾವೀ ಪತಿ ಯಶಸ್ ಅವರನ್ನೂ ಕರೆದು ಸನ್ಮಾನಿಸಲಾಯಿತು. ಈ ವೇಳೆ ಅಲ್ಲಿದ್ದವರು ಅವರು ಯಾರೆಂದು ಪರಿಚಯ ಮಾಡಿಕೊಡಮ್ಮ ಎಂದು ಅದಿತಿ ಬೆನ್ನುಬಿದ್ದರು.