Select Your Language

Notifications

webdunia
webdunia
webdunia
webdunia

ಇಂಡಿಯನ್ ಸ್ಟೈಲಲ್ಲಿ ಮಗುವಿಗೆ ಸ್ನಾನ ಮಾಡಿಸಲ್ಲ ಎಂದಿದ್ದಕ್ಕೆ ಟ್ರೋಲ್ ಆದ ನಟಿ ಸಂಜನಾ ಗಲ್ರಾನಿ

ಇಂಡಿಯನ್ ಸ್ಟೈಲಲ್ಲಿ ಮಗುವಿಗೆ ಸ್ನಾನ ಮಾಡಿಸಲ್ಲ ಎಂದಿದ್ದಕ್ಕೆ ಟ್ರೋಲ್ ಆದ ನಟಿ ಸಂಜನಾ ಗಲ್ರಾನಿ
ಬೆಂಗಳೂರು , ಮಂಗಳವಾರ, 6 ಸೆಪ್ಟಂಬರ್ 2022 (08:40 IST)
ಬೆಂಗಳೂರು: ಇತ್ತೀಚೆಗಷ್ಟೇ ಗಂಡು ಮಗುವಿಗೆ ತಾಯಿಯಾಗಿರುವ ನಟಿ ಸಂಜನಾ ಗಲ್ರಾನಿ ಈಗ ಸೋಷಿಯಲ್ ಮೀಡಿಯಾದಲ್ಲಿ ಮಗುವಿನ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ.

ಸಂಜನಾ ಆಗಾಗ ಬೇಬಿ ಕೇರ್ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಾರೆ. ಈ ಬಾರಿ ಮಗುವಿಗೆ ಯಾವುದೇ ಕಿರಿ ಕಿರಿಗಳಿಲ್ಲದೇ ಹೇಗೆ ಸ್ನಾನ ಮಾಡಿಸಬಹುದು ಎಂದು ತಮ್ಮ ಮಗನನ್ನೇ ಇಟ್ಟುಕೊಂಡು ವಿಡಿಯೋ ಮಾಡಿದ್ದಾರೆ.

ಇದಕ್ಕೂ ಮೊದಲು ವಿವರಣೆ ನೀಡುವಾಗ ಸಂಜನಾ ‘ನನ್ನ ಮಗುವಿಗೆ ಇಂಡಿಯನ್ ಸ್ಟೈಲಲ್ಲಿ ಎಣ್ಣೆ ಹಾಕಿ ಮಗುಚಿ ಹಾಕಿ, ಕಿವಿಗೆ ಗಾಳಿ ಊದಿ, ಕಿರಿ ಕಿರಿ ನೀಡಿ ಸ್ನಾನ ಮಾಡಿಸಲ್ಲ’ ಎಂದಿದ್ದರು. ಅವರ ಈ ಮಾತಿಗೆ ನೆಟ್ಟಿಗರು ಕಟುವಾಗಿ ಪ್ರತಿಕ್ರಿಯಿಸಿದ್ದು, ನೀವು ಯಾವ ದೇಶದವರು? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಭಾರತೀಯ ಶೈಲಿಯ ಸ್ನಾನದ ಉಪಯೋಗವೇ ನಿಮಗೆ ಯಾರೂ ಹೇಳಿಲ್ಲ ಎನಿಸುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೊತೆ ಜೊತೆಯಲಿ ಧಾರವಾಹಿ ಅಭಿಮಾನಿಗಳಿಂದ ವಾಹಿನಿಗೆ ಮುತ್ತಿಗೆ