ಬೆಂಗಳೂರು: ಮದುವೆಯಾಗಿ ಪುತ್ರನ ಆಗಮನದ ಬಳಿಕ ನಟಿ ಮಯೂರಿ ಸಿನಿಮಾದಿಂದ ಬಹುತೇಕ ದೂರವೇ ಉಳಿದಿದ್ದಾರೆ.
									
			
			 
 			
 
 			
			                     
							
							
			        							
								
																	ಮಗುವಾದ ಬಳಿಕ ಅವರು ಯಾವುದೇ ಸಿನಿಮಾದಲ್ಲಿ ಅಭಿನಯಿಸಿಲ್ಲ. ಇನ್ನೇನು ವಾಪಸ್ ಸಿನಿಮಾಗೆ ಬರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಅದರ ನಡುವೆ ಮಯೂರಿ ಹೊಸ ಸುದ್ದಿ ಕೊಟ್ಟಿದ್ದಾರೆ.
									
										
								
																	ಮಯೂರಿ ಈಗ ಸಿನಿಮಾ ಬಿಟ್ಟು ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ಸ್ಕಿನ್ ಒ ಕ್ಲಾಕ್ ಎನ್ನುವ ಸ್ಕಿನ್ ಮತ್ತು ಹೇರ್ ಕ್ಲಿನಿಕ್ ಒಂದನ್ನು ಶುರು ಮಾಡಿದ್ದಾರೆ. ಇದಕ್ಕೆ ನಿಮ್ಮೆಲ್ಲರ ಬೆಂಬಲ ಬೇಕು ಎಂದು ಮಯೂರಿ ಕೇಳಿಕೊಂಡಿದ್ದಾರೆ.