Select Your Language

Notifications

webdunia
webdunia
webdunia
webdunia

ಈ ವಾರ ಪವರ್ ಸ್ಟಾರ್ ಅಪ್ಪು ಸಿನಿಮಾ ನೋಡಲು ರೆಡಿಯಾಗಿ: ಅಡ್ವಾನ್ಸ್ ಬುಕಿಂಗ್ ಶುರು

ಈ ವಾರ ಪವರ್ ಸ್ಟಾರ್ ಅಪ್ಪು ಸಿನಿಮಾ ನೋಡಲು ರೆಡಿಯಾಗಿ: ಅಡ್ವಾನ್ಸ್ ಬುಕಿಂಗ್ ಶುರು
ಬೆಂಗಳೂರು , ಸೋಮವಾರ, 5 ಸೆಪ್ಟಂಬರ್ 2022 (08:50 IST)
ಬೆಂಗಳೂರು: ಈ ವಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿಗೆ ವಿಶೇಷ. ಯಾಕೆಂದರೆ ಇದೇ ವಾರಂತ್ಯಕ್ಕೆ ಪವರ್ ಸ್ಟಾರ್ ಕೊನೆಯದಾಗಿ ಅತಿಥಿ ಪಾತ್ರದಲ್ಲಿ ನಟಿಸಿರುವ ಸಿನಿಮಾ ಲಕ್ಕಿಮ್ಯಾನ್ ಬಿಡುಗಡೆಯಾಗುತ್ತಿದ್ದು ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ.

ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಕಾಮಿಡಿ-ಲವ್ ಎಂಟರ್ ಟೈನರ್ ಸಿನಿಮಾದಲ್ಲಿ ಪುನೀತ್ ದೇವಮಾನವನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಜೊತೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಚಾರ್ಲಿ ಸಿನಿಮಾ ಖ್ಯಾತಿಯ ಸಂಗೀತ ಚಿತ್ರದ ನಾಯಕಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾಗೇ ಗುಡ್ ಬೈ ಹೇಳಲು ಹೊರಟರಾ ನಯನತಾರಾ? ಫ್ಯಾನ್ಸ್ ಗೆ ಶಾಕ್