ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸೆಪ್ಟೆಂಬರ್ 18 ರಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದು ಅವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.
ಪ್ರತೀ ವರ್ಷ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಉಪೇಂದ್ರ ಅಭಿಮಾನಿಗಳು, ಕೇಕ್, ಹಾರ,ತುರಾಯಿ ಹಿಡಿದುಕೊಂಡು ಬರುತ್ತಾರೆ. ಆದರೆ ಈ ಬಾರಿ ಹುಟ್ಟುಹಬ್ಬದ ದಿನ ಮನೆಗೆ ಬರುವವರು ತಪ್ಪದೇ ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಉತ್ತಮ ವಿಚಾರ ಬರೆದುಕೊಂಡು ಬನ್ನಿ ಎಂದು ಉಪ್ಪಿ ಮನವಿ ಮಾಡಿದ್ದಾರೆ.
ಅಷ್ಟೇ ಅಲ್ಲ, ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವನ್ನೂ ಕೊಡುವುದಾಗಿ ಉಪೇಂದ್ರ ಹೇಳಿದ್ದಾರೆ. ಈ ಮೂಲಕ ಬರ್ತ್ ಡೇ ಆಚರಿಸಿಕೊಳ್ಳುವ ವಿಚಾರದಲ್ಲೂ ತಾವು ಡಿಫರೆಂಟ್ ಎಂದು ಉಪೇಂದ್ರ ಮಾಡಿ ತೋರಿಸಿದ್ದಾರೆ.