Publish Date: Fri, 02 Sep 2022 (10:16 IST)
Updated Date: Fri, 02 Sep 2022 (10:18 IST)
ಬೆಂಗಳೂರು: ಡಾಲಿ ಧನಂಜಯ್-ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಾನ್ಸೂನ್ ರಾಗ ಸಿನಿಮಾ ರಿಲೀಸ್ ದಿನಾಂಕ ಕೊನೆಗೂ ಬಹಿರಂಗವಾಗಿದೆ.
ಚಿತ್ರ ಆಗಸ್ಟ್ ನಲ್ಲೇ ತೆರೆ ಕಾಣಬೇಕಿತ್ತು. ಆದರೆ ಈಗಾಗಲೇ ಕಾರಣಾಂತರಗಳಿಂದ ಎರಡು ಬಾರಿ ರಿಲೀಸ್ ದಿನಾಂಕ ಮುಂದೂಡಿಕೆಯಾಗಿತ್ತು.
ಇದೀಗ ಸೆಪ್ಟೆಂಬರ್ 16 ರಂದು ಸಿನಿಮಾ ಥಿಯೇಟರ್ ಗೆ ಬರುವುದು ಪಕ್ಕಾ ಆಗಿದೆ. ಚಿತ್ರತಂಡ ಈಗಷ್ಟೇ ರಿಲೀಸ್ ದಿನಾಂಕ ಘೋಷಿಸಿದೆ. ಅನೂಪ್ ಸಿಳೀನ್ ಸಂಗೀತ ಸಂಯೋಜನೆಯಲ್ಲಿ ಸುಮಧುರ ಹಾಡುಗಳ ಮೂಲಕ, ವಿಶಿಷ್ಟ ಟ್ರೈಲರ್ ಮೂಲಕ ಈಗಾಗಲೇ ಮಾನ್ಸೂನ್ ರಾಗ ಜನರ ಗಮನ ಸೆಳೆಯುತ್ತಿದೆ.