Select Your Language

Notifications

webdunia
webdunia
webdunia
webdunia

ಕಾಂತಾರ ಟ್ರೈಲರ್ ರಿಲೀಸ್ ದಿನಾಂಕ ಘೋಷಿಸಿದ ಹೊಂಬಾಳೆ ಫಿಲಂಸ್

ಕಾಂತಾರ ಟ್ರೈಲರ್ ರಿಲೀಸ್ ದಿನಾಂಕ ಘೋಷಿಸಿದ ಹೊಂಬಾಳೆ ಫಿಲಂಸ್
ಬೆಂಗಳೂರು , ಗುರುವಾರ, 1 ಸೆಪ್ಟಂಬರ್ 2022 (16:34 IST)
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಬಹುನಿರೀಕ್ಷಿತ ಕಾಂತಾರ ಸಿನಿಮಾದ ಟ್ರೈಲರ್ ಲಾಂಚ್ ದಿನಾಂಕ ಪ್ರಕಟವಾಗಿದೆ.

ಸಿನಿಮಾದ ಟ್ರೈಲರ್ ಸೆಪ್ಟೆಂಬರ್ 5 ರಂದು 11.45 ಕ್ಕೆ ಲಾಂಚ್ ಆಗಲಿದೆ. ಈ ಸಿನಿಮಾ ಸಂಪೂರ್ಣವಾಗಿ ಕರಾವಳಿ ಹಿನ್ನಲೆಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ರಿಷಬ್ ಪಕ್ಕಾ ಕುಂದಾಪುರ ಭಾಷೆಯಲ್ಲಿ ಮಾತನಾಡಿದ್ದಾರೆ. ಕಂಬಳವೆಂಬ ಗ್ರಾಮೀಣ ಕ್ರೀಡೆಯನ್ನೂ ಬಳಸಿಕೊಳ್ಳಲಾಗಿದೆ.

ಕಾಂತಾರ ರಿಷಬ್ ನಿರ್ದೇಶನದ ಮತ್ತೊಂದು ಮೈಲಿಗಲ್ಲಿನ ಸಿನಿಮಾ ಎಂದೇ ನಂಬಲಾಗಿದೆ. ಈ ಸಿನಿಮಾ ಸೆಪ್ಟೆಂಬರ್ 30 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಕೆಜಿಎಫ್ ಬಳಿಕ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಬಿಡುಗಡೆಯಾಗುತ್ತಿರುವ ಮತ್ತೊಂದು ಸಿನಿಮಾ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆಯಲ್ಲಿ ಸ್ಟಾರ್ ಆಗಿರುವ ಮಾಸ್ಟರ್ ಆನಂದ್ ಪುತ್ರಿ ವನ್ಷಿಕಾ ಈಗ ಬೆಳ್ಳಿತೆರೆಗೆ