Publish Date: Thu, 01 Sep 2022 (11:23 IST)
Updated Date: Thu, 01 Sep 2022 (11:27 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ನಿರ್ಮಾಣದ ಪರಂವಾ ಸ್ಟುಡಿಯೋಸ್ ನಿರ್ಮಾಣದಲ್ಲಿ ದಿಗಂತ್ ಹೊಸ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಓಡಾಡುತ್ತಿತ್ತು.
ಅದೀಗ ಅಧಿಕೃತವಾಗಿ ಘೋಷಣೆಯಾಗಿದೆ. ದಿಗಂತ್ ಮಂಚಾಲೆ ಜೊತೆಗೆ ರಿಷಬ್ ಶೆಟ್ಟಿ, ಅಚ್ಯುತ್ ಕುಮಾರ್ ಸಾಥ್ ಕೊಡಲಿದ್ದಾರೆ. ಈ ಸಿನಿಮಾಗೆ ಬ್ಯಾಚುಲರ್ ಪಾರ್ಟಿ ಎಂದು ಟೈಟಲ್ ಫಿಕ್ಸ್ ಆಗಿದೆ.
ರಕ್ಷಿತ್ ತಮ್ಮ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ಹೊರತರಲಿದ್ದಾರೆ. ಅಭಿಜಿತ್ ಮಹೇಶ್ ಚಿತ್ರಕತೆ ಬರೆದು ನಿರ್ದೇಶನ ಮಾಡಲಿದ್ದಾರೆ. ಫಸ್ಟ್ ಲುಕ್ ಬಿಡುಗಡೆಯಾಗಿದ್ದು ರಕ್ಷಿತ್ ಆಂಡ್ ಟೀಂನ ಮತ್ತೊಂದು ಮಾಸ್ಟರ್ ಪೀಸ್ ಎನ್ನುವುದು ಪಕ್ಕಾ ಆಗುತ್ತಿದೆ.