ಬೆಂಗಳೂರು: ಶಿಕ್ಷಕರ ದಿನಾಚರಣೆಯಂದು ಕಾಮಿಡಿ ಕಿಂಗ್ ಶರಣ್ ನಾಯಕರಾಗಿ ನಟಿಸಿರುವ ಗುರು ಶಿಷ್ಯರು ಸಿನಿಮಾದ ಟ್ರೈಲರ್ ಲಾಂಚ್ ಆಗಿದೆ.
ಶರಣ್ ಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಸಿನಿಮಾ ಇದಾಗಿದೆ.
ಟ್ರೈಲರ್ ನೋಡುತ್ತಿದ್ದರೆ ಶರಣ್ ಶಿಕ್ಷಕರ ಪಾತ್ರ ಮಾಡಿದ್ದು, ಶಾಲೆಯೊಂದನ್ನು ಉಳಿಸಿಕೊಳ‍್ಳುವ ಅಡೆತಡೆಗಳ ಬಗ್ಗೆ ಇಂಟ್ರರೆಸ್ಟಿಂಗ್ ಕತೆ ಹೇಳಲಾಗಿದೆ ಎಂಬುದು ಸ್ಪಷ್ಟ. ಸೆಪ್ಟೆಂಬರ್ 23 ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.