Publish Date: Mon, 05 Sep 2022 (16:21 IST)
Updated Date: Mon, 05 Sep 2022 (16:24 IST)
ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದ ಟ್ರೈಲರ್ ನೋಡಿದರೆ ಕರಾವಳಿ ಕಡೆಗೆ ಒಮ್ಮೆ ಹೋಗಿ ಬಂದಂತೆನಿಸುತ್ತದೆ. ಕಂಬಳ ಗದ್ದೆಯ ಪೈಪೋಟಿ, ಭೂತಕೋಲದ ಅಬ್ಬರ ಇದರ ಜೊತೆಗೆ ನಾಯಕ ಮತ್ತು ಅರಣ್ಯಾಧಿಕಾರಿಯೊಬ್ಬನ ನಡುವೆ ನಡೆಯುವ ಜಿದ್ದಾಜಿದ್ದಿನ ಕಾಳಗವೇ ಕಾಂತಾರ ಎನ್ನಬಹುದು.
ರಿಷಬ್ ಶೆಟ್ಟಿ ಎಂದಿನಂತೆ ತಮ್ಮ ಸಿನಿಮಾದ ಕತೆ, ಭಾಷೆಯ ಮೂಲಕವೇ ಜನರನ್ನು ಸೆಳೆಯುತ್ತಾರೆ. ಇನ್ನು, ಅಪ್ಪಟ ಕನ್ನಡ ಪ್ರತಿಭೆ ಕಿಶೋರ್ ಖಳನಟನಾಗಿ ಮಿಂಚಿದ್ದಾರೆ. ಈ ಸಿನಿಮಾ ಸೆ.30 ರಂದು ತೆರೆಗೆ ಬರಲಿದೆ.