Select Your Language

Notifications

webdunia
webdunia
webdunia
webdunia

ಕೊನೆಗೂ ನಟಿ ಮೇಘಾ ಶೆಟ್ಟಿ ಮೊದಲ ಸಿನಿಮಾ ಬಿಡುಗಡೆಗೆ ರೆಡಿ

ಕೊನೆಗೂ ನಟಿ ಮೇಘಾ ಶೆಟ್ಟಿ ಮೊದಲ ಸಿನಿಮಾ ಬಿಡುಗಡೆಗೆ ರೆಡಿ
ಬೆಂಗಳೂರು , ಭಾನುವಾರ, 11 ಸೆಪ್ಟಂಬರ್ 2022 (08:10 IST)
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಮೂಲಕ ಸೆನ್ಸೇಷನಲ್ ಆದ ನಾಯಕಿ ನಟಿ ಮೇಘಾ ಶೆಟ್ಟಿ ಸ್ಯಾಂಡಲ್ ವುಡ್ ನಲ್ಲೂ ಹಲವು ಸಿನಿಮಾ ಒಪ್ಪಿಕೊಂಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ತ್ರಿಬಲ್ ರೈಡಿಂಗ್, ಧನ್ವೀರ್ ಗೌಡ ಜೊತೆಗೆ ಕೈವಾ, ಡಾರ್ಲಿಂಗ್ ಕೃಷ್ಣ ಜೊತೆಗೆ ದಿಲ್ ಪಸಂದ್ ಸಿನಿಮಾದಲ್ಲಿ ಮೇಘಾ ಅಭಿನಯಿಸಿದ್ದಾರೆ. ಈ ಪೈಕಿ ತ್ರಿಬಲ್ ರೈಡಿಂಗ್ ಅವರು ಒಪ್ಪಿಕೊಂಡ ಮೊದಲ ಸಿನಿಮಾ. ಆ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ.

ಹೀಗಾಗಿ ಮೇಘಾ ಶೆಟ್ಟಿ ಮೊದಲ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೋ ಎಂದು ಕಾಯುತ್ತಿದ್ದ ಫ್ಯಾನ್ಸ್ ಗೆ ಸಿಹಿ ಸುದ್ದಿ ಸಿಕ್ಕಿದೆ. ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ನಿಶ್ವಿಕಾ ನಾಯ್ಡು, ಮೇಘಾ  ಪ್ರಮುಖ ಪಾತ್ರದಲ್ಲಿರುವ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೈನರ್ ದಿಲ್ ಪಸಂದ್ ನವಂಬರ್ 11 ರಂದು ರಿಲೀಸ್ ಡೇಟ್ ಘೋಷಣೆ ಮಾಡಿಕೊಂಡಿದೆ. ಈ ಮೂಲಕ ಮೊದಲ ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿಯಲ್ಲಿ ಮೇಘಾ ಶೆಟ್ಟಿ ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಶಿವರಾಜ್‌ಕುಮಾರ್‌ ಹಾಡಿಗೆ ರಾಘವೇಂದ್ರ ಭರ್ಜರಿ ಡ್ಯಾನ್ಸ್‌