Select Your Language

Notifications

webdunia
webdunia
webdunia
webdunia

ಶಕ್ತಿಧಾಮಕ್ಕೆ ಭೇಟಿ ಕೊಟ್ಟ ತಮಿಳು ನಟ ವಿಶಾಲ್

webdunia
ಶನಿವಾರ, 10 ಸೆಪ್ಟಂಬರ್ 2022 (16:13 IST)
ಮೈಸೂರು: ಡಾ.ರಾಜ್ ಕುಟುಂಬ ನಡೆಸಿಕೊಂಡು ಬರುತ್ತಿರುವ ಮೈಸೂರಿನ ಶಕ್ತಿಧಾಮಕ್ಕೆ ತಮಿಳು ನಟ ವಿಶಾಲ್ ಭೇಟಿ ನೀಡಿದ್ದಾರೆ.

ಪುನೀತ್ ರಾಜ್ ಕುಮಾರ್ ನಿಧನರಾದಾಗ ಅವರು ಶಕ್ತಿಧಾಮದಲ್ಲಿರುವ ಬಡ ಹೆಣ್ಣುಮಕ್ಕಳಿಗೆ ಸಹಾಯ ಜೊತೆಗೆ ಇನ್ನೂ ಅನೇಕ ಸಮಾಜಸೇವೆ ಎಲ್ಲರಿಗೂ ಗೊತ್ತಾಗಿತ್ತು. ಪುನೀತ್ ನಮನ ಕಾರ್ಯಕ್ರಮದಲ್ಲಿ ಶಕ್ತಿಧಾಮಕ್ಕೆ ನಾನು ಮನೆ ಕಟ್ಟಲು ಎತ್ತಿಟ್ಟಿರುವ ಹಣ ನೀಡಿ ಸಹಾಯ ಮಾಡುತ್ತೇನೆ, ಅದಕ್ಕೆ ದೊಡ್ಮನೆ ಕುಟುಂಬ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದರು.

ಪುನೀತ್ ನಿಧನದ ಬಳಿಕ ಶಿವರಾಜ್ ಕುಮಾರ್-ಗೀತಾ ದಂಪತಿ ಶಕ್ತಿಧಾಮದ ಸಂಪೂರ್ಣ ಹೊಣೆ ಹೊತ್ತುಕೊಂಡಿದ್ದಾರೆ. ಇದೀಗ ಅದೇ ಶಕ್ತಿಧಾಮಕ್ಕೆ ಭೇಟಿ ನೀಡಿರುವ ವಿಶಾಲ್, ಇಲ್ಲಿನ ಮಕ್ಕಳನ್ನು ಮಾತನಾಡಿಸಿ ಎಲ್ಲರ ಜೊತೆ ಹಾಡಿ, ಕುಣಿದು ಖುಷಿಪಟ್ಟಿದ್ದಾರೆ. ಮುಂದೆ ತಾನೂ ಶಕ್ತಿಧಾಮದ ಸ್ವಯಂ ಸೇವಕನಾಗಿರಲು ಬಯಸುತ್ತೇನೆ ಎಂದು ವಿಶಾಲ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರಾ: ನಟಿ ರೆಜಿನಾ ಹೇಳಿಕೆ