Publish Date: Thu, 17 Aug 2017 (11:35 IST)
Updated Date: Thu, 17 Aug 2017 (11:39 IST)
ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ತಮ್ಮ ಜತೆ ಸೆಲ್ಫೀ ತೆಗೆಯಲು ಬಂದ ಅಭಿಮಾನಿಗೆ ಕಪೋಳ ಮೋಕ್ಷ ಮಾಡಿದ್ದಾರೆ.
ಮುಂಬರುವ ಉಪಚುನಾವಣೆಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಬಾಲಕೃಷ್ಣ ಬಳಿ ಅಭಿಮಾನಿಯೊಬ್ಬ ಸೆಲ್ಫೀ ತೆಗೆಯುವ ಆಸೆಯಿಂದ ಸನಿಹ ಬಂದಿದ್ದ.
ಇದರಿಂದ ಕೆರಳಿದ ಬಾಲಕೃಷ್ಣ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಹಿಂದೊಮ್ಮೆ ಇದೇ ರೀತಿ ತಿರುಪತಿಗೆ ಭೇಟಿ ನೀಡಿದ್ದಾಗ ಸೆಲ್ಫೀ ತೆಗೆಯಲು ಬಂದಿದ್ದ ಅಭಿಮಾನಿಗೆ ಬಾಲಕೃಷ್ಣ ಕಪಾಳಕ್ಕೆ ಹೊಡೆದಿದ್ದರು. ಇದೀಗ ಕೆಲವೇ ತಿಂಗಳುಗಳ ಅವಧಿಯಲ್ಲಿ ಮತ್ತೆ ಅದೇ ಕೆಲಸ ಮಾಡಿದ್ದಾರೆ.