ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಹಿಂದೊಮ್ಮೆ ಪ್ರಧಾನಿ ಮೋದಿ ಎದುರು ತೊಡೆ ಕಾಣುವಂತೆ ಕೂತಿದ್ದಕ್ಕೆ ಟ್ವಿಟರ್ ನಲ್ಲಿ ಟೀಕೆಗೊಳಗಾಗಿದ್ದು ನೆನಪಿರಬಹುದು. ಇದೀಗ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ.
									
										
								
																	
 
ಅದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ವಿಡಿಯೋದಿಂದಾಗಿ. ಅಂತಹದ್ದೇನು ಇತ್ತು ಅದರಲ್ಲಿ ಅಂತೀರಾ?
									
			
			 
 			
 
 			
					
			        							
								
																	ಸ್ವಾತಂತ್ರ್ಯೋತ್ಸವಕ್ಕೆ ಶುಭಕೋರುವ ವಿಡಿಯೋ ಪ್ರಕಟಿಸಿದ ಪ್ರಿಯಾಂಕಾ ತ್ರಿವರ್ಣದ ಶಾಲು ತೊಟ್ಟಿದ್ದರು. ಆದರೆ ಸೀರೆ ಉಟ್ಟಿರಲಿಲ್ಲ. ಎದೆ ಸೀಳು ದರ್ಶನ ಮಾಡುವಂತಹ ಟಿ ಶರ್ಟ್ ಧರಿಸಿದ್ದಕ್ಕೇ ಇನ್ ಸ್ಟಾಗ್ರಾಂನಲ್ಲಿ ಜನರು ಪ್ರಿಯಾಂಕಾ ಕಾಲೆಳೆದಿದ್ದಾರೆ.
									
										
								
																	ನಿಮಗೆ ಸೀರೆ ಇಲ್ಲವೇ ಕನಿಷ್ಠ ಪಕ್ಷ ಚೂಡಿದಾರ್ ಗೂ ಗತಿಯಿರಲಿಲ್ಲವೇ ಎಂದು ಕೆಲವರು ಕಾಲೆಳೆದರೆ, ಇನ್ನು ಕೆಲವರು ಮತ್ತೆ ಭಾರತಕ್ಕೆ ಬರಬೇಡಿ ಎಂದು ಕಿಡಿ ಕಾರಿದ್ದಾರೆ.