Publish Date: Mon, 26 Jun 2017 (09:09 IST)
Updated Date: Mon, 26 Jun 2017 (09:12 IST)
ಹೈದರಾಬಾದ್: ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ತೆಲುಗು ನಟ ರವಿ ತೇಜಾ ಸಹೋದರ ಭರತ್ ಅಂತ್ಯಕ್ರಿಯೆ ಸಂದರ್ಭದಲ್ಲಿ ಕುಟುಂಬದವರೇ ಹಾಜರಿರಿಲಿಲ್ಲ.
ರವಿತೇಜಾ ಮನೆಯಲ್ಲೇ ಇದ್ದರೂ ಸಹೋದರನ ಮೃತದೇಹದ ಅಂತಿಮ ದರ್ಶನವನ್ನೂ ಪಡೆಯಲು ಬರಲಿಲ್ಲ. ಅಲ್ಲದೆ ಭರತ್ ಮೃತದೇಹವನ್ನು ನೇರವಾಗಿ ಸ್ಮಶಾನಕ್ಕೆ ಕರೆದೊಯ್ಯಲಾಗಿತ್ತು. ಭರತ್ ಮನೆಗೆ ಅಥವಾ ರವಿತೇಜಾ ಮನೆಗೆ ಮೃತದೇಹವನ್ನು ಕೊಂಡೊಯ್ದಿರಲಿಲ್ಲ.
ಹಾಗಿದ್ದರೂ ಕುಟುಂಬ ಸದಸ್ಯರ ಪೈಕಿ ರವಿ ತೇಜಾ ಇನ್ನೊಬ್ಬ ಸಹೋದರ ರಘು ಮಾತ್ರ ಅಂತಿಮ ವಿಧಿವಿಧಾನದ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರವಿ ತೇಜಾ ಸೇರಿದಂತೆ ಕುಟುಂಬ ಸದಸ್ಯರು ಭರತ್ ಸಾವಿನಿಂದ ತೀವ್ರ ಆಘಾತಗೊಂಡಿದ್ದಾರೆ. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ಭರತ್ ಮುಖ ದರ್ಶನ ಮಾಡಲು ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿಯೇ ಯಾರೂ ಅಂತ್ಯ ಕ್ರಿಯೆಗೆ ಬರಲಿಲ್ಲ ಎಂದು ಕುಟುಂಬದ ಮೂಲಗಳು ಹೇಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ