Select Your Language

Notifications

webdunia
webdunia
webdunia
webdunia

ರಸ್ತೆ ಅಪಘಾತದಲ್ಲಿ ತೆಲುಗು ನಟ ರವಿತೇಜ ಸಹೋದರ ಭರತ್ ಸಾವು

ರಸ್ತೆ ಅಪಘಾತದಲ್ಲಿ ತೆಲುಗು ನಟ ರವಿತೇಜ ಸಹೋದರ ಭರತ್ ಸಾವು
ಹೈದ್ರಾಬಾದ್ , ಭಾನುವಾರ, 25 ಜೂನ್ 2017 (11:38 IST)
ಟಾಲಿವುಡ್`ನ ಮಾಸ್ ಮಹಾರಾಜ ನಟ ರವಿತೇಜಾ ಸಹೋದರ ಭರತ್ ರಾಜು ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ನಟನೂ ಆಗಿರುವ ಭರತ್ ರಾಜು ಟಾಲಿವುಡ್`ನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಶಂಶಾಬಾದ್ ಪ್ರದೇಶದ ಕೊತ್ವಾಲ್ ಘಡ ಹಳ್ಳಿ ಸಮೀಪದ ಔಟರ್ ರಿಂಗ್ ರೋಡ್ ಬಳಿ ಸಂಭವಿಸಿದ ಅಪಘಾತದಲ್ಲಿ ಭರತ್ ಅಸುನೀಗಿದ್ದಾರೆ. ಭರತ್ ಅತಿವೇಗವಾಗಿ ಕಾರು ಚಲಿಸುತ್ತಿದ್ದು, ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಸಂದರ್ಭ ಗಂಭೀರ ಗಾಯವಾಗಿದ್ದು, ಭರತ್ ರಾಜು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಭರತ್ ಮೃತದೇಹವನ್ನ ಒಸ್ಮಾನಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಸಹ ನಟರಾಗಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಭರತ್ ರಾಜು ವಿವಾದಗಳ ಮೂಲಕವೇ ಸುದ್ದಿಯಾಗಿದ್ದರು. ಮಾದಕ ವಸ್ತು ಪ್ರಕರಣವೊಂದರಲ್ಲೂ ಭರತ್ ರಾಜು ಹೆಸರು ಕೇಳಿಬಂದಿತ್ತು. ಸಿನಿಮಾ ನಟನೆಗಾಗಿ ಭರತ್`ಗೆ ಪ್ರಶಸ್ತಿಗಳೂ ಬಂದಿದ್ದು, ಕಳೆದ ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಥಮ್ ಮಾಡಿದ ಒಂದು ಒಳ್ಳೆ ಕೆಲಸ