Publish Date: Fri, 09 Sep 2022 (08:20 IST)
Updated Date: Fri, 09 Sep 2022 (08:49 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾಲಿಗೆ ಇಂದು ನಿಜಕ್ಕೂ ವಿಶೇಷ ದಿನ. ಪುನೀತ್ ರನ್ನು ಕೊನೆಯ ಬಾರಿಗೆ ಕಮರ್ಷಿಯಲ್ ಸಿನಿಮಾದಲ್ಲಿ ತೆರೆ ಮೇಲೆ ನೋಡುವ ಭಾಗ್ಯ ಇಂದು.
ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಪುನೀತ್ ಅತಿಥಿ ಪಾತ್ರದಲ್ಲಿರುವ ಲಕ್ಕಿ ಮ್ಯಾನ್ ಸಿನಿಮಾ ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಚಿತ್ರಕ್ಕೆ ಮೊದಲ ಶೋನಲ್ಲೇ ಉತ್ತಮ ಪ್ರತಿಕ್ರಿಯೆ ಬಂದಿದೆ.
ಪುನೀತ್ ದೇವರಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ನಿಧನರಾದ ಬಳಿಕ ಅಭಿಮಾನಿಗಳು ಅವರನ್ನು ದೇವರಂತೇ ನೋಡುತ್ತಿದ್ದಾರೆ. ಇದೀಗ ದೇವರಾಗಿಯೇ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದು, ಪುನೀತ್ ಅಭಿಮಾನಿಗಳು ಸಿನಿಮಾ ನೋಡಲು ಥಿಯೇಟರ್ ಗೆ ಲಗ್ಗೆಯಿಡುತ್ತಿದ್ದಾರೆ.