Publish Date: Thu, 08 Sep 2022 (09:00 IST)
Updated Date: Thu, 08 Sep 2022 (09:21 IST)
ಬೆಂಗಳೂರು: ಸೆಪ್ಟೆಂಬರ್ ನಲ್ಲಿ ಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷಿತ ಹಲವು ಸಿನಿಮಾಗಳು ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿವೆ. ಯಾವೆಲ್ಲಾ ಸಿನಿಮಾಗಳಿವೆ ಎಂದು ನೋಡೋಣ.
ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿರುವ ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಲಕ್ಕಿಮ್ಯಾನ್ ಸಿನಿಮಾ ಸೆಪ್ಟೆಂಬರ್ 9 ರಂದು ತೆರೆಗೆ ಬರುತ್ತಿದೆ.
ಡಾಲಿ ಧನಂಜಯ್-ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿರುವ ಮ್ಯೂಸಿಕಲ್ ಹಿಟ್ ಮಾನ್ಸೂನ್ ರಾಗ ಸೆಪ್ಟೆಂಬರ್ 16 ರಂದು ರಿಲೀಸ್ ಡೇಟ್ ಘೋಷಣೆ ಮಾಡಿಕೊಂಡಿದೆ. ಇನ್ನು ಸೆಪ್ಟೆಂಬರ್ 23 ರಂದು ಶರಣ್ ನಾಯಕರಾಗಿರುವ ಗುರು ಶಿಷ್ಯರು ಸಿನಿಮಾ ರಿಲೀಸ್ ಆಗುತ್ತಿದೆ. ಸೆಪ್ಟೆಂಬರ್ 30 ರಂದು ನವರಸನಾಯಕ ಜಗ್ಗೇಶ್ ನಾಯಕರಾಗಿರುವ ತೋತಾಪುರಿ ಮತ್ತು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಈ ತಿಂಗಳು ಸಿನಿ ಪ್ರಿಯರಿಗೆ ಹಬ್ಬವಾಗಲಿದೆ.