Select Your Language

Notifications

webdunia
webdunia
webdunia
webdunia

ಪತ್ನಿಗೆ ಸೀಮಂತ ಶಾಸ್ತ್ರ ನೆರವೇರಿಸಿದ ಧ್ರುವ ಸರ್ಜಾ

ಪತ್ನಿಗೆ ಸೀಮಂತ ಶಾಸ್ತ್ರ ನೆರವೇರಿಸಿದ ಧ್ರುವ ಸರ್ಜಾ
ಬೆಂಗಳೂರು , ಗುರುವಾರ, 8 ಸೆಪ್ಟಂಬರ್ 2022 (08:10 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕುಟುಂಬದಲ್ಲಿ ಇದೀಗ ಸಂಭ್ರಮದ ವಾತಾವರಣವಿದೆ. ಧ್ರುವ ಪತ್ನಿ ಪ್ರೇರಣಾ ಇದೀಗ ತುಂಬು ಗರ್ಭಿಣಿ.

ಇತ್ತೀಚೆಗಷ್ಟೇ ಧ್ರುವ ಈ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಇದೀಗ ಧ್ರುವ ತಮ್ಮ ಮುದ್ದಿನ ಮಡದಿಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ.

ಧ್ರುವ ಹೆತ್ತವರು, ಮಾವ ಅರ್ಜುನ್ ಸರ್ಜಾ, ಅತ್ತಿಗೆ ಮೇಘನಾ, ರಾಯನ್ ರಾಜ್ ಸರ್ಜಾ ಸೇರಿದಂತೆ ಕುಟುಂಬಸ್ಥರು, ಸ್ಯಾಂಡಲ್ ವುಡ್ ನ ಆಪ್ತರ ಸಮ್ಮುಖದಲ್ಲಿ ಧ್ರುವ ಪತ್ನಿಯ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಚಿರು ಸರ್ಜಾ ಸಾವಿನ ದುಃಖದ ಬಳಿಕ ರಾಯನ್ ಜನನ ಸರ್ಜಾ ಕುಟುಂಬಕ್ಕೆ ಸಂತೋಷ ನೀಡಿತ್ತು. ಇದೀಗ ಧ್ರುವ-ಪ್ರೇರಣಾ ಕಡೆಯಿಂದ ಸರ್ಜಾ ಕುಟುಂಬಕ್ಕೆ ಮತ್ತೊಬ್ಬ ಸದಸ್ಯನ ಸೇರ್ಪಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಷಾರಾಮಿ ಮನೆಯಿಂದ ಹೊರಬಿದ್ದ ಲೈಗರ್ ನಿರ್ಮಾಪಕ ಪುರಿ ಜಗನ್ನಾಥ್?