Select Your Language

Notifications

webdunia
webdunia
webdunia
webdunia

ಐಷಾರಾಮಿ ಮನೆಯಿಂದ ಹೊರಬಿದ್ದ ಲೈಗರ್ ನಿರ್ಮಾಪಕ ಪುರಿ ಜಗನ್ನಾಥ್?

ಐಷಾರಾಮಿ ಮನೆಯಿಂದ ಹೊರಬಿದ್ದ ಲೈಗರ್ ನಿರ್ಮಾಪಕ ಪುರಿ ಜಗನ್ನಾಥ್?
ಹೈದರಾಬಾದ್ , ಗುರುವಾರ, 8 ಸೆಪ್ಟಂಬರ್ 2022 (08:00 IST)
ಹೈದರಾಬಾದ್: ವಿಜಯ್ ದೇವರಕೊಂಡ ನಾಯಕರಾಗಿದ್ದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಯನೀಯ ಸೋಲು ಕಂಡು ವಿತರಕರು ತೀವ್ರ ನಷ್ಟ ಅನುಭವಿಸಿದ್ದಾರೆ.

ಸದ್ಯಕ್ಕೆ ತೀವ್ರ ಹಣಕಾಸಿನ ಸಂಕಷ್ಟಕ್ಕೀಡಾಗಿರುವ ಪುರಿ ಮುಂಬೈನಲ್ಲಿ ತಾವು ಬಾಡಿಗೆಗಿದ್ದ ಐಷಾರಾಮಿ ಫ್ಲ್ಯಾಟ್ ತೆರವುಗೊಳಿಸಲು ತೀರ್ಮಾನಿಸಿದ್ದಾರಂತೆ. ಈ ಫ್ಲ್ಯಾಟ್ ಗೆ ಅವರು ಮಾಸಿಕ 10 ಲಕ್ಷ ರೂ. ಬಾಡಿಗೆ ಕೊಡಬೇಕಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಾಡಿಗೆ, ಇತರ ಖರ್ಚು ವೆಚ್ಚಗಳಿಗೆ ಇಷ್ಟೊಂದು ಹಣ ಪೋಲು ಮಾಡುವ ಸ್ಥಿತಿಯಲ್ಲಿ ಅವರಿಲ್ಲ.

ಈ ಕಾರಣಕ್ಕೆ ಮುಂಬೈನ ಐಷಾರಾಮಿ ಮನೆ ಬಿಟ್ಟು ಬೇರೆ ಮನೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವಿಜಯ್ ದೇವರಕೊಂಡ ಕೂಡಾ ತಮ್ಮ ಸಂಭಾವನೆಯಿಂದ 6 ಕೋಟಿ ರೂ. ಬಿಟ್ಟುಕೊಡಲು ತೀರ್ಮಾನಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಡಾಲಿ ಧನಂಜಯ್ ಹೊಯ್ಸಳಕ್ಕೆ ಮುಹೂರ್ತ ಇಟ್ಟ ಚಿತ್ರತಂಡ