Publish Date: Thu, 08 Sep 2022 (18:06 IST)
Updated Date: Thu, 08 Sep 2022 (18:11 IST)
ಮುಂಬೈ: ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿಯನ್ನು ಭೇಟಿ ಮಾಡಿದ ಕ್ಷಣಗಳನ್ನು ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಕ್ರಿಕೆಟ್ ಪ್ರಿಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅನೇಕ ಕ್ರಿಕೆಟಿಗರೊಂದಿಗೂ ಕಿಚ್ಚನಿಗೆ ಒಡನಾಟವಾಗಿದೆ.
ಇದೀಗ ಕರ್ನಾಟಕ ಮೂಲದವರಾದ ಮಾಜಿ ಕ್ರಿಕೆಟ್, ಕೋಚ್ ರವಿಶಾಸ್ತ್ರಿಯವರನ್ನು ಭೇಟಿ ಮಾಡಿದ್ದು, ನಿಮ್ಮ ಜೊತೆಗೆ ಕಳೆದ ಕ್ಷಣ ಮತ್ತು ನೀವು ಇದುವರೆಗೆ ಹೇಳಿರದ ಅನೇಕ ವಿಚಾರಗಳನ್ನು ಕೇಳಿ ಖುಷಿಯಾಯಿತು. ಮತ್ತೆ ನಿಮ್ಮನ್ನು ಭೇಟಿಯಾಗುವೆ ಎಂದು ಬರೆದುಕೊಂಡಿದ್ದಾರೆ.