Publish Date: Thu, 08 Sep 2022 (09:20 IST)
Updated Date: Thu, 08 Sep 2022 (09:39 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಇದೀಗ ಜೀ5 ಆಪ್ ನಲ್ಲೂ ಪ್ರಸಾರವಾಗುತ್ತಿದೆ. ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿ 200 ಕೋಟಿ ಗಳಿಕೆ ಮಾಡಿತ್ತು.
ಈ ಸಿನಿಮಾವನ್ನು ವೀಕ್ಷಿಸಿರುವ ಮಾಜಿ ಕ್ರಿಕೆಟಿಗ, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಚಿತ್ರದ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಕೂಡಾ ಧನ್ಯವಾದ ಸಲ್ಲಿಸಿದ್ದಾರೆ.
ವಿಕ್ರಾಂತ್ ರೋಣ ವೀಕ್ಷಿಸಿದ. ಕಿಚ್ಚ ಸುದೀಪ್ ರದ್ದು ಅತ್ಯದ್ಭುತ ಅಭಿನಯ. ಕೊನೆವರೆಗೆ ಕುತೂಹಲ ಕಾಯ್ದಿಡುತ್ತದೆ. ಅದರಲ್ಲೂ ನನ್ನ ಸ್ನೇಹಿತ ವಿಜಯ್ ಪ್ರಕಾಶ್ ಹಾಡಿದ ಲಾಲಿ ಹಾಡು ಸುಮಧುರವಾಗಿದೆ. ಅನೂಪ್ ಭಂಡಾರಿ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಕುಂಬ್ಳೆ ಹೊಗಳಿದ್ದಾರೆ.
Krishnaveni K
Publish Date: Thu, 08 Sep 2022 (09:20 IST)
Updated Date: Thu, 08 Sep 2022 (09:39 IST)