Publish Date: Fri, 09 Sep 2022 (08:10 IST)
Updated Date: Fri, 09 Sep 2022 (08:45 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಕನ್ನಡಿಗರಿಗೆ ಅಧೀರನಾಗಿ ಪರಿಚಿತರಾಗಿರುವ ಬಾಲಿವುಡ್ ನಟ ಸಂಜಯ್ ದತ್ ಈಗ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಂದಿದೆ.
ಧ್ರುವ ಸರ್ಜಾ-ಜೋಗಿ ಪ್ರೇಮ್ ಕಾಂಬಿನೇಷನ್ ನ ಸಿನಿಮಾವೊಂದು ಕೆಲವು ದಿನಗಳ ಹಿಂದೆ ಘೋಷಣೆಯಾಗಿತ್ತು. ಆದರೆ ಧ್ರುವ ಸರ್ಜಾ ಅಜ್ಜಿ ತೀರಿಕೊಂಡಿದ್ದು, ನಂತರ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಕಾರಣ ಸಿನಿಮಾ ಕೆಲಸಗಳು ನಡೆದಿರಲಿಲ್ಲ. ಅಲ್ಲದೆ, ಸದ್ಯಕ್ಕೆ ಮಾರ್ಟಿನ್ ಕೆಲಸಗಳಲ್ಲಿ ಧ್ರುವ ಬ್ಯುಸಿಯಾಗಿದ್ದಾರೆ.
ಇದಾದ ಬಳಿಕ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ಧ್ರುವ ನಾಯಕರಾಗಿದ್ದು, ಈ ಸಿನಿಮಾದಲ್ಲಿ ಖಳನಾಗಿ ಸಂಜಯ್ ದತ್ ಅಬ್ಬರಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. 1970 ರ ಕಾಲದ ಕತೆಯಿರುವ ಸಿನಿಮಾದಲ್ಲಿ ನಟಿಸಲು ಸಂಜಯ್ ದತ್ ಕೂಡಾ ಆಸಕ್ತಿ ತೋರಿಸಿದ್ದಾರಂತೆ.