Publish Date: Thu, 08 Sep 2022 (18:41 IST)
Updated Date: Thu, 08 Sep 2022 (18:43 IST)
ಬೆಂಗಳೂರು: ನಟ ವಿಜಯ್ ರಾಘವೇಂದ್ರ ಈಗಾಗಲೇ ಸಸ್ಪೆನ್ಸ್ ಥ್ರಿಲ್ಲರ್ ಪಾತ್ರಗಳಿಗೂ ತಾವು ಸೈ ಎಂದು ನಿರೂಪಿಸಿದ್ದಾರೆ.
ಸೀತಾರಾಮ್ ಸಿನಿಮಾ ಬಳಿಕ ಮತ್ತೆ ರಾಘು ಪೊಲೀಸ್ ಕ್ಯಾಪ್ ತೊಡುತ್ತಿದ್ದಾರೆ. ಅವರ ಹೊಸ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರದ ಸಿನಿಮಾ ಘೋಷಣೆಯಾಗಿದ್ದು, ಇದಕ್ಕೆ ಕೊಂಡಾಣ ಎಂದು ಟೈಟಲ್ ಇಡಲಾಗಿದೆ.
ಈ ಸಿನಿಮಾದಲ್ಲಿ ವಿಜಯ್ ಗೆ ನಾಯಕಿಯಾಗಿ ಭಾವನಾ ಮೆನನ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಕೂಡಾ ಆರಂಭವಾಗಿದೆ. ಸೀತಾರಾಮ್ ಬಿನೋಯ್ ನಿರ್ದೇಶಿಸಿದ್ದ ದೇವಿ ಪ್ರಸಾದ್ ಶೆಟ್ಟಿಯೇ ಈ ಸಿನಿಮಾಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.