ಹೈದರಾಬಾದ್: ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಆದರೆ ನಿರೀಕ್ಷೆಗೆ ತಕ್ಕ ಹಾಗೆ ಪ್ರದರ್ಶನ ಕಾಣಲಿಲ್ಲ.
ಹೀಗಾಗಿ ಸಿನಿಮಾ ಬಿಡುಗಡೆಯಾದ ಒಂದೇ ವಾರಕ್ಕೆ ಥಿಯೇಟರ್ ನಿಂದ ಎತ್ತಂಗಡಿಯಾಗುವ ಭೀತಿಯಲ್ಲಿದೆ. ಗಣೇಶ ಹಬ್ಬವಾಗಿದ್ದರಿಂದ ರಜಾ ದಿನಗಳಲ್ಲಿ ಜನ ಥಿಯೇಟರ್ ಗೆ ಬಂದು ಸಿನಿಮಾ ನೋಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಅದೂ ಸುಳ್ಳಾಗಿದೆ.
ಹೀಗಾಗಿ ಈಗ ಥಿಯೇಟರ್ ನಿಂದ ಹೊರಬೀಳಲಿದ್ದು, ಸದ್ಯದಲ್ಲೇ ಒಟಿಟಿಯಲ್ಲಿ ಸಿನಿಮಾ ಪ್ರಸಾರವಾಗುವ ನಿರೀಕ್ಷೆಯಿದೆ.