ಚೆನ್ನೈ: ಇತ್ತೀಚೆಗೆ ಬಿಡುಗಡೆಯಾದ ಲೈಗರ್ ಸಿನಿಮಾಗೆ ಬಿಡುಗಡೆಗೂ ಮೊದಲು ಅತಿಯಾದ ಅಬ್ಬರವಿತ್ತು. ಆದರೆ ಚಿತ್ರ ನಿರೀಕ್ಷಿಸಿದಷ್ಟು ಗಳಿಕೆ ಮಾಡಲಿಲ್ಲ.
ಆದರೆ ನಟ ಧನುಷ್ ನಾಯಕರಾಗಿರುವ ತಿರುಚ್ಚಿತ್ರಂಬಲಮ್ ಸಿನಿಮಾಗೆ ಸದ್ದಿಲ್ಲದೇ ಬಿಡುಗಡೆಯಾಗಿ ಈಗ ಬಾಕ್ಸ್ ಆಫೀಸ್ ನಲ್ಲಿ 75 ಕೋಟಿ ರೂ. ಬಾಚಿಕೊಂಡಿದೆ.
ಹೀಗಾಗಿ ಪ್ರಚಾರ, ಹೈಪ್ ಎಷ್ಟೇ ಇದ್ದರೂ ಕತೆ ಚೆನ್ನಾಗಿಲ್ಲ ಎಂದರೆ ಪ್ರೇಕ್ಷಕ ಸಿನಿಮಾ ನೋಡಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಆದರೆ ಧನುಷ್ ಸಿನಿಮಾ ಬಿಡುಗಡೆಯಾದ ಮೇಲೆ ಚಿತ್ರದ ಬಗ್ಗೆ ಬಂದ ಒಳ್ಳೆಯ ವಿಮರ್ಶೆಗಳಿಂದಾಗಿ ಜನ ಥಿಯೇಟರ್ ಗೆ ಲಗ್ಗೆಯಿಡುತ್ತಿದ್ದಾರೆ.