Publish Date: Thu, 01 Sep 2022 (09:10 IST)
Updated Date: Thu, 01 Sep 2022 (09:16 IST)
ಹೈದರಾಬಾದ್: ವಿಜಯ್ ದೇವರಕೊಂಡ ನಾಯಕರಾಗಿರುವ ಲೈಗರ್ ಸಿನಿಮಾ ಬಿಡುಗಡೆಯಾದ ಮೇಲೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತದೆ ಎಂದು ನಂಬಲಾಗಿತ್ತು.
ಆದರೆ ನಿರೀಕ್ಷಿಸಿದಂತೆ ಗಳಿಕೆ ಮಾಡಿರಲಿಲ್ಲ. ಹಾಗಿದ್ದರೂ ಸಿನಿಮಾ 100 ಕೋಟಿ ರೂ. ಗಳಿಕೆ ಮಾಡಿದೆ ಎಂಬ ಸುದ್ದಿಗಳಿವೆ. ಆದರೆ ಇದೆಲ್ಲಾ ಸುಳ್ಳು ಎಂದು ಚಿತ್ರತಂಡದ ಮೂಲಗಳೇ ಹೇಳುತ್ತಿವೆ.
ಚಿತ್ರ ಇನ್ನೂ ಶೇ.60 ರಷ್ಟು ಗಳಿಕೆ ಮಾಡಿದೆಯಷ್ಟೇ. 100 ಕೋಟಿ ರೂ. ಗಳಿಸಿರುವುದೆಲ್ಲಾ ಸುಳ್ಳು ಎನ್ನಲಾಗಿದೆ. ಮೊದಲ ದಿನವೇ ಅಪಪ್ರಚಾರದಿಂದಾಗಿಯೇ ಈ ಸಿನಿಮಾ ಸೋತಿತು ಎನ್ನುವುದು ಚಿತ್ರತಂಡದ ಅಳಲು.