Publish Date: Thu, 11 Mar 2021 (08:45 IST)
Updated Date: Thu, 11 Mar 2021 (08:47 IST)
ಹೈದರಾಬಾದ್ : ತೆಲುಗು ರಿಯಾಲಿಟಿ ಶೋ ಬಿಗ್ ಬಾಸ್ 1 ನ್ನು ಆಯೋಜಿಸಿದ ಬಳಿಕ ನಟ ಜೂನಿಯರ್ ಎನ್ ಟಿಆರ್ ಅವರು ಇಎಂಕೆ –ಎವಾರು ಮೀಲೊ ಕೋಟೀಸ್ ವರಲು ಎಂಬ ಟಿ.ವಿ ಕಾರ್ಯಕ್ರಮದೊಂದಿಗೆ ಸಣ್ಣ ಪರದೆಯಲ್ಲಿ ಬರಲಿದ್ದಾರೆ.
ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಜೂನಿಯರ್ ಎನ್ ಟಿಆರ್ ಅವರ ಲುಕ್ ಹಾಗೂ ಎವಾರು ಮೀಲೊ ಕೋಟೀಸ್ ವರಲು ಕಾರ್ಯಕ್ರಮದ ರಸಪ್ರಶ್ನೆ ಪ್ರದರ್ಶನ ಸೋರಿಕೆಯಾಗಿದೆ. ಶೀಘ್ರದಲ್ಲಿಯೇ ಪ್ರಾರಂಭವಾಗಲಿರುವ ಜೂನಿಯರ್ ಎನ್ ಟಿಆರ್ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾಹಿತಿ ಪ್ರಕಾರ ಇಎಂಕೆ ಕಾರ್ಯಕ್ರಮದ ನಿರ್ಮಾಪಕರು ಮಾರ್ಚ್ 13ರಂದು ನಟನ ಲುಕ್ ಹಾಗೂ ಟೀಸರ್ ಅನ್ನು ಅನಾವರಣಗೊಳಿಸಲು ಯೋಜಿಸಿದ್ದರು. ಆದರೆ ಅದು ಈಗ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದೆ.