Select Your Language

Notifications

webdunia
webdunia
webdunia
webdunia

ಕಾರ್ತಿಕೇಯ 2 ಚಿತ್ರದಲ್ಲಿ ನಟಿಸಲಿದ್ದಾರೆ ಬಾಲಿವುಡ್ ನ ಹಿರಿಯ ನಟ

ಕಾರ್ತಿಕೇಯ 2 ಚಿತ್ರದಲ್ಲಿ ನಟಿಸಲಿದ್ದಾರೆ ಬಾಲಿವುಡ್ ನ ಹಿರಿಯ ನಟ
ಹೈದರಾಬಾದ್ , ಬುಧವಾರ, 10 ಮಾರ್ಚ್ 2021 (10:29 IST)
ಹೈದರಾಬಾದ್ : ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಅವರು  ಮುಂಬರುವ ಕಾರ್ತಿಕೇಯ 2 ಚಿತ್ರದಲ್ಲಿ ನಟಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಚಿತ್ರದಲ್ಲಿ ಯುವ ನಟ ನಿಖಿಲ್ ಸಿದ್ಧಾರ್ಥ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಥ್ರಿಲ್ಲರ್ ಚಿತ್ರವಾಗಿದ್ದು ಇದರಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಇದೀಗ ಕಾರ್ತಿಕೇಯ 2 ಚಿತ್ರದ ನಿರ್ಮಾಪಕರು ಹೊಸ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಆ ಮೂಲಕ ನಟ ಅನುಪಮ್ ಖೇರ್ ಅವರನ್ನು ತಂಡಕ್ಕೆ ಸ್ವಾಗತಿಸಿದ್ದಾರೆ.  ಅವರು ಧನ್ವಂತ್ರಿ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲಿಯೇ ಅವರು ಸೆಟ್ ಗೆ ಸೇರಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೃಶ್ಯಂ 2 ಚಿತ್ರತಂಡ ಸೇರಲಿರುವ ನಟ ರಾಣಾ ದಗ್ಗುಬಾಟಿ