Select Your Language

Notifications

webdunia
webdunia
webdunia
webdunia

ದೃಶ್ಯಂ 2 ಚಿತ್ರತಂಡ ಸೇರಲಿರುವ ನಟ ರಾಣಾ ದಗ್ಗುಬಾಟಿ

ದೃಶ್ಯಂ 2 ಚಿತ್ರತಂಡ ಸೇರಲಿರುವ ನಟ ರಾಣಾ ದಗ್ಗುಬಾಟಿ
ಹೈದರಾಬಾದ್ , ಬುಧವಾರ, 10 ಮಾರ್ಚ್ 2021 (10:25 IST)
ಹೈದರಾಬಾದ್ : ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿರುವ ದೃಶ್ಯಂ 2 ಚಿತ್ರ ತೆಲುಗಿಗೆ ರಿಮೇಕ್ ಆಗಲಿದೆ. ಈ ಚಿತ್ರಕ್ಕೂ ದೃಶ್ಯಂ 2 ಎಂದು ಹೆಸರಿಡಲಾಗಿದೆ. ಇದರಲ್ಲಿ ನಟ ವೆಂಕಟೇಶ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚಿನ ಮಾಹಿತಿ ಪ್ರಕಾರ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಅವರು ಈ ‘ದೃಶ್ಯಂ 2’ ಚಿತ್ರದಲ್ಲಿ ನಿರ್ಣಾಯಕ ಪಾತ್ರದಲ್ಲಿ ನಟಿಸಲಿದ್ದಾರಂತೆ.  ಇದರಲ್ಲಿ ಅವರು ಮುರಳಿ ಗೋಪಿ ಅವರ ಪಾತ್ರವನ್ನು ಮಾಡಲಿದ್ದಾರಂತೆ. ಈ ಬಗ್ಗೆ ಮಾತುಕತೆ ನಡೆದಿದ್ದು ಇದಕ್ಕೆ ರಾಣಾ ಅವರು ಕೂಡ ಒಪ್ಪಿಗೆ ನೀಡಿದ್ದಾರಂತೆ.

ಈ ತಿಂಗಳ ಅಂತ್ಯದ ವೇಳೆಗೆ ಅವರು ಸೆಟ್ ಗೆ ಸೇರುವ ನಿರೀಕ್ಷೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅಲ್ಲದೇ ಇತ್ತೀಚೆಗೆ ನಡೆದ ಚಿತ್ರದ  ಪೂಜಾ ಸಮಾರಂಭದಲ್ಲಿ ವೆಂಕಟೇಶ್ ಅವರ ಜೊತೆ ರಾಣಾ ದಗ್ಗುಬಾಟಿ ಭಾಗವಹಿಸಿದ್ದರು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಿನ ಶೋನಲ್ಲೇ ದಾಖಲೆ ಮಾಡಲಿರುವ ರಾಬರ್ಟ್