ಹೈದರಾಬಾದ್ : ಖ್ಯಾತ ನಟಿ ಅನುಪಮಾ ಪರಮೇಶ್ವರ್ ಅವರು ಟಾಲಿವುಡ್ ಮತ್ತು ಮಾಲಿವುಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು 2015ರಲ್ಲಿ ಬಿಡುಗಡೆಯಾದ ಪ್ರೇಮಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಇದೀಗ ಅವರು ಭಾರತೀಯ ಕ್ರಿಕೆಟ್ ಟೀಂ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಜೊತೆಗೆ ಮದುವೆಯಾಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದೆ. ಆದರೆ ಇದೀಗ ನಟಿ ಅನುಪಮಾ ಪರಮೇಶ್ವರ್ ಅವರ ತಾಯಿ ಸಂದರ್ಶನವೊಂದರಲ್ಲಿ ಈ ವದಂತಿಯನ್ನು ನಿರಾಕರಿಸಿದ್ದು ಅವರಿಬ್ಬರು ಕೇವಲ ಉತ್ತಮ ಸ್ನೇಹಿತರು ಎಂದು ಹೇಳುವುದರ ಮೂಲಕ ಈ ವದಂತಿಗೆ ಬ್ರೇಕ್ ಹಾಕಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!