Select Your Language

Notifications

webdunia
webdunia
webdunia
webdunia

‘ಜಾತಿ ರತ್ನಲು’ ಚಿತ್ರದ ಪೂರ್ವ ಬಿಡುಗಡೆಗೆ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಖ್ಯಾತ ನಟ

webdunia
ಮಂಗಳವಾರ, 9 ಮಾರ್ಚ್ 2021 (09:17 IST)
ಹೈದರಾಬಾದ್ : ನವೀನ್ ಪಾಲಿಶೆಟ್ಟಿ  ಮುಖ್ಯ ಪಾತ್ರದಲ್ಲಿ ನಟಿಸಿದ ‘ಜಾತಿ ರತ್ನಲು’ ಚಿತ್ರದ ಪೂರ್ವ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿಜಯ್ ದೇವರಕೊಂಡ ಭಾಗವಹಿಸಲಿದ್ದಾರೆ.

ಈ ಚಿತ್ರ ಮಾರ್ಚ್ 11ರಂದು ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯ ಪ್ರಾರಂಭಿಸಿದೆ. ಇತ್ತೀಚೆಗೆ ನಡೆದ ಟ್ರೈಲರ್ ಲಾಂಚ್ ನ್ನು ಸ್ಟಾರ್ ನಟ ಪ್ರಭಾಸ್ ಅವರು ಮಾಡಿದ್ದಾರೆ. ಇದೀಗ ಪೂರ್ವ ಬಿಡುಗಡೆ ಕಾರ್ಯಕ್ರಮವನ್ನು ನಡೆಸಲು ನಿರ್ಮಾಪಕರು ನಿರ್ಧರಿಸಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿಜಯ್ ದೇವರಕೊಂಡ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಈ ಯೋಜನೆಯ ನಿರ್ಮಾಪಕರಾಗಿದ್ದು, ಅನುದೀಪ್ ಕೆ.ವಿ ಈ ಚಿತ್ರದ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ.  

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಸೈರಾಮ್ ಶಂಕರ್ ಅಭಿನಯದಲ್ಲಿ ಮೂಡಿಬರಲಿದೆ ಬಂಪರ್ ಆಫರ್ 2