ಹೈದರಾಬಾದ್ : ಅಲ್ಲಾರಿ ನರೇಶ್ ಅವರು ನಟಿಸಿದ ನಾಂದಿ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಚಿತ್ರವನ್ನು ರಿಮೇಕ್ ಮಾಡಲು ಹಲವು ನಿರ್ಮಾಪಕರು ಮುಂದಾಗಿದ್ದಾರೆ. ಈ ನಡುವೆ ಈ ಚಿತ್ರವನ್ನು ನೋಡಿದ ಸ್ಟಾರ್ ನಟ ನಾನಿ ಅವರು ಅಲ್ಲಾರಿ ನರೇಶ್ ಅವರಿಗೆ ಸಲಹೆಯೊಂದನ್ನು ನೀಡಿದ್ದಾರೆ.
ಅಲ್ಲಾರಿ ನರೇಶ್ ಅವರು “ಅಲ್ಲಾರಿ” ಎಂಬ ಚಿತ್ರದಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದರು. ಹಾಗಾಗಿ ಇವರಿಗೆ ಜನರು ಅಲ್ಲಾರಿ ನರೇಶ್ ಎಂದು ಹೆಸರಿಟ್ಟಿದ್ದಾರೆ. ಇದೀಗ ಅಲ್ಲಾರಿ ನರೇಶ್ ಅವರ ನಾಂದಿ ಚಿತ್ರ ಪ್ರೇಕ್ಷಕರ ಮನಗೆದ್ದ ಹಿನ್ನಲೆಯಲ್ಲಿ ಈ ಚಿತ್ರವನ್ನು ನೊಡಿದ ನಟ ನಾನಿ ಪ್ರಭಾವಿತರಾಗಿ ಅವರ ಹೆಸರನ್ನು ಬದಲಾಯಿಸುವಂತೆ ಸೂಚಿಸಿದ್ದಾರೆ.