Publish Date: Mon, 08 Mar 2021 (09:58 IST)
Updated Date: Mon, 08 Mar 2021 (10:01 IST)
ಹೈದರಾಬಾದ್ : ಸುಂದೀಪ್ ಕಿಶನ್ ಮತ್ತು ಲಾವಣ್ಯ ತ್ರಿಪಾಠಿ ಮುಖ್ಯ ಪಾತ್ರದಲ್ಲಿ ನಟಿಸಿದ ಕ್ರೀಡಾ ಆಧಾರಿತ ಚಿತ್ರ ಎ1 ಎಕ್ಸ್ ಪ್ರೆಸ್ ಆನ್ ಲೈನ್ ಪೈರಸಿಗೆ ಬಲಿಯಾಗಿದೆ.
ಡೆನ್ನಿಸ್ ಜೀವನ್ ಕಾನುಕೋಲನು ನಿರ್ದೇಶನದ ಎ1 ಎಕ್ಸ್ ಪ್ರೆಸ್ ಚಿತ್ರ ಮಾರ್ಚ್ 5ರಂದು ಬಿಡುಗಡೆಯಾಗಿ ಜನರಿಂದ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹಾಕಿ ಕ್ರೀಡೆಗೆ ಸಂಬಂಧಪಟ್ಟ ಈ ಚಿತ್ರವನ್ನು ಖ್ಯಾತ ಪೈರಸಿ ವೆಬ್ ಸೈಟ್ ತಮಿಳು ರಾಕರ್ಸ್ ಸೋರಿಕೆ ಮಾಡಿದೆ. ಇದರಿಂದ ಚಿತ್ರದ ಸಂಗ್ರಹದಲ್ಲಿ ತೊಂದರೆಯಾಗಲಿದೆ ಎನ್ನಲಾಗಿದೆ. ಈ ಕಾರಣದಿಂದ ಸುಂದೀಪ್ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.