Publish Date: Mon, 08 Mar 2021 (07:18 IST)
Updated Date: Mon, 08 Mar 2021 (07:20 IST)
ಶಹಜಹಾನ್ಪುರ : 27 ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯೊಬ್ಬಳು ತನ್ನ ಮಗ ತನ್ನ ತಂದೆಯ ಬಗ್ಗೆ ವಿಚಾರಿಸಿದ ಹಿನ್ನಲೆಯಲ್ಲಿ ಇದೀಗ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.
ಮಹಿಳೆ 12 ವರ್ಷದವಳಿದ್ದಾಗ ಆಕೆಯ ಮೇಲೆ ಇಬ್ಬರು ಪುರುಷರು ಮಾನಭಂಗ ಎಸಗಿದ್ದರು. ಇದರಿಂದ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಆಕೆಗೆ ಮದುವೆಯಾಗಿದ್ದು, ಪತಿಗೆ ಅತ್ಯಾಚಾರದ ವಿಚಾರ ತಿಳಿದು ಮಹಿಳೆಗೆ ಡಿವೋರ್ಸ್ ನೀಡಿದ್ದಾನೆ.
ಇದೀಗ ಮಗ ತನ್ನ ತಂದೆಯ ಬಗ್ಗೆ ಕೇಳಲು ಶುರು ಮಾಡಿದ್ದಾನೆ. ಇದರಿಂದ ನೊಂದ ಮಹಿಳೆ ಪೊಲೀಸರಿಗೆ ಅತ್ಯಾಚಾರಿಗಳ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ ಎನ್ನಲಾಗಿದೆ.