Select Your Language

Notifications

webdunia
webdunia
webdunia
Thursday, 10 April 2025
webdunia

‘ಆಚಾರ್ಯ’ ಚಿತ್ರದ ದೃಶ್ಯ ಸೋರಿಕೆ; ಪೊಲೀಸರ ಮೆಲೆ ಸಿಟ್ಟಾದ ನಿರ್ಮಾಪಕರು

ಹೈದರಾಬಾದ್
ಹೈದರಾಬಾದ್ , ಮಂಗಳವಾರ, 9 ಮಾರ್ಚ್ 2021 (10:13 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ ‘ಆಚಾರ್ಯ’ ಚಿತ್ರದ ಸೇನೆಯ ಸಮವಸ್ತ್ರ ಧರಿಸಿದ ಫೋಟೊ ಅಪರಿಚಿತರಿಂದ ಸೋರಿಕೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವರದಿಯ ಪ್ರಕಾರ ತಂದೆ ಮಗ ಜೋಡಿ ಶಾಟ್ ನೀಡಲು ಸಿದ್ಧತೆ ನಡೆಸುತ್ತಿರುವಾಗ ಅದನ್ನು ಅಪರಿಚಿತ ವ್ಯಕ್ತಿಯೊಬ್ಬರು ಕ್ಲಿಕ್ ಮಾಡಿದ್ದಾರೆ. ಚಿತ್ರತಂಡ ಸೋರಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಇದು ಯೆಲ್ಲಾಂಡುವಿನಲ್ಲಿ  ಗಣಿಗಾರಿಕೆ ಸ್ಥಳದಲ್ಲಿ ನಡೆದ ಶೂಟಿಂಗ್ ವೇಳೆ ಸಂಭವಿಸಿದೆ ಎನ್ನಲಾಗಿದೆ.

ಪೊಲೀಸರ ನಿರ್ಲಕ್ಷ್ಯವೇ ಸೋರಿಕೆ ಕಾರಣ ಎಂದು ನಿರ್ಮಾಪಕರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೀಗಾಗಿ ಘಟನೆಯ ನಂತರ ಸೆಟ್ ಗಳಲ್ಲಿ ಭದ್ರತೆಯನ್ನು ಭದ್ರಪಡಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ: ಕನ್ನಡ ನಿರ್ಮಾಪಕನ ಮನೆ ಮೇಲೆ ದಾಳಿ