Publish Date: Wed, 10 Mar 2021 (11:45 IST)
Updated Date: Wed, 10 Mar 2021 (11:47 IST)
ಬೆಂಗಳೂರು: ಇಂಥಾ ಅಭಿಮಾನಿಗಳನ್ನು ಪಡೆದ ನಾವೇ ಧನ್ಯ. ಹೀಗಂತ ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬರು ಪುನೀತ್ ಚಿತ್ರವನ್ನು ಬರೆದಿದ್ದನ್ನು ನೋಡಿ ಸಂತೋಷ್ ಈ ಮಾತು ಹೇಳಿದ್ದಾರೆ. ಅದರಲ್ಲೇನಿದೆ ವಿಷಯ ಅಂತೀರಾ?
ಈ ಅಭಿಮಾನಿ ವಿಕಲಚೇತನ. ಕೈಗಳು ಸರಿಯಾಗಿಲ್ಲದಿದ್ದರೂ ಪುನೀತ್ ರ ಚಿತ್ರವನ್ನು ನಿಜವೇನೋ ಎಂಬಷ್ಟು ಜೀವಂತಿಕೆ ತುಂಬಿ ಚಿತ್ರಿಸಿದ್ದಾನೆ. ಹೀಗಾಗಿ ಈತನ ಕೈಚಳಕಕ್ಕೆ ಸೋತ ಸಂತೋಷ್ ಆನಂದ್ ರಾಮ್ ಇಂತಹ ಅಭಿಮಾನಿಗಳನ್ನು ಪಡೆದ ನಾವೇ ಧನ್ಯ. ನಿಮ್ಮನ್ನು ಪಡೆದ ನಾವು ಪುನೀತ. ಪದವಿ ಅಂಕೆ ಇದ್ದರೆ ನೀ ಗೆದ್ದ ಹಾಗಲ್ಲ ವಿನಯ ಮೌಲ್ಯ ಎಂದಿಗೂ ಸೋಲುವುದಿಲ್ಲ. ಅಣ್ಣಾವ್ರ ಬದುಕೇ ಒಂದು ಪಾಠಶಾಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.